ಪ್ರಿಯದರ್ಶಿನಿಯಲ್ಲಿ ಶಾಲಾ ವಿದ್ಯಾರ್ಥಿ ಸಂಘ ಉದ್ಘಾಟನೆ

0

 ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ವಿದ್ಯಾಗಿರಿ ಬೆಟ್ಟಂಪಾಡಿ ಇಲ್ಲಿನ 2024 -25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತು ಚುನಾವಣೆ ಜೂನ್ 8 ರಂದು ನಡೆದಿದ್ದು ಜು. 26 ರಂದು ಕೇಶವ ದರ್ಶಿನಿ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಶಾಲಾ ನಾಯಕಿಯಾಗಿ 10ನೇ ತರಗತಿ ವಿದ್ಯಾರ್ಥಿನಿಯಾದ ಸಮನ್ವಿ ಎನ್, ಉಪನಾಯಕನಾಗಿ 7ನೇ ತರಗತಿ ವಿದ್ಯಾರ್ಥಿ ಹೃಶಿಕೇಶ್ ಪಿ.ಎಂ, ಕಾರ್ಯದರ್ಶಿಯಾಗಿ 9ನೇ ತರಗತಿ ವಿದ್ಯಾರ್ಥಿ ಅದ್ವಿತ್ ರೈ ಹಾಗೂ ಜೊತೆ ಕಾರ್ಯದರ್ಶಿಯಾಗಿ 8ನೇ ತರಗತಿ ವಿದ್ಯಾರ್ಥಿನಿ ವೃದ್ಧಿ.ಸಿ ಆಯ್ಕೆಗೊಂಡಿರುತ್ತಾರೆ.

 ಸಾಂಸ್ಕೃತಿಕ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿನಿ ಧನ್ವಿ ರೈ ಕೋಟೆ 7ನೇ ತರಗತಿ ವಿದ್ಯಾರ್ಥಿನಿ ಸಿಂಚನ ಬಿ. ಎಸ್ ,ಕೃಷಿ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿ ಸಿಂಚನ್ ಹಾಗೂ 7ನೇ ತರಗತಿ ವಿದ್ಯಾರ್ಥಿ ಧನುಷ್ ಆಯ್ಕೆಗೊಂಡರು. ಶಿಕ್ಷಣ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯ ಯು. ರೈ ಹಾಗೂ 9ನೇ ತರಗತಿ ವಿದ್ಯಾರ್ಥಿ ಶ್ರೀರಾಮ ಶರ್ಮ, ಆರೋಗ್ಯ ಮಂತ್ರಿಗಳಾಗಿ 7ನೇ ತರಗತಿ ವಿದ್ಯಾರ್ಥಿ ನಿಮಿತ್ ರೈ ಹಾಗೂ 7ನೇ ತರಗತಿ ವಿದ್ಯಾರ್ಥಿನಿ ಪ್ರಣ್ವಿ ಪ್ರಸಾದ್, ಕ್ರೀಡಾ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿ ಲಿಖಿತ್ ರೈ ,ಆಹಾರ ಮಂತ್ರಿಗಳಾಗಿ ಎಂಟನೇ ತರಗತಿ ವಿದ್ಯಾರ್ಥಿ ಆಯುಶ್ ರೈ ಹಾಗೂ ಒಂಬತ್ತನೇ ತರಗತಿ ವಿದ್ಯಾರ್ಥಿ ನಿಶಾಂತ್, ನೀರಾವರಿ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿಗಳಾದ ಜಯ ಸ್ವರೂಪ ,ಸೃಜನ್ ಎಂಟನೇ ತರಗತಿ ವಿದ್ಯಾರ್ಥಿಗಳಾದ ಅಭಿಜ್ಞಾ ಹಾಗೂ ಕೃತಿ ಕೆ ಎಸ್ ಆಯ್ಕೆಗೊಂಡರು. 

ವಿದ್ಯಾರ್ಥಿ ಸಂಘದ ಉದ್ಘಾಟಕರಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶ್ ಮಾತನಾಡಿ ಮಂತ್ರಿ ಮಂಡಲವು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವುದರೊಂದಿಗೆ ಅವರಲ್ಲಿರುವ ಕೌಶಲವನ್ನು ಬೆಳೆಸುತ್ತದೆ. ಜ್ಞಾನದ ಬಳಕೆಯೊಂದಿಗೆ ಕೌಶಲವನ್ನು ಬೆಳೆಸುವುದೇ ಇದರ ಉದ್ದೇಶ ಎಂದರು. ಶಾಲಾ ಮುಖ್ಯ ಗುರು ರಾಜೇಶ್ ಎನ್ ಪ್ರಮಾಣವಚನ ಕಾರ್ಯಕ್ರಮ ನಡೆಸಿಕೊಟ್ಟರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗೊತ್ತು  ಅವರು ಮಾತನಾಡಿ ನಿಮ್ಮ ಆಡಳಿತದ ಅವಧಿಯಲ್ಲಿ ಪ್ರಾಮಾಣಿಕ, ದಕ್ಷ, ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು. ಸಹ ಶಿಕ್ಷಕಿ ರಕ್ಷಿತಾ ಸ್ವಾಗತಿಸಿ ಶಾಲಾ ನಾಯಕಿ ಸಮನ್ವಿ ವಂದಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಶರಣ್ಯ ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here