ರೋಟರಿ ಪುತ್ತೂರು ಸ್ವರ್ಣದಿಂದ ಆಟೋ ಚಾಲಕ ಜಗನ್ನಾಥ ಪಿ. ಅವರಿಗೆ ಸನ್ಮಾನ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಜು. 27ರಂದು ಕ್ಲಬ್ ಅಧ್ಯಕ್ಷರ ಮನೆಯಲ್ಲಿ ನಡೆದ ಕುಟುಂಬ ಸಮ್ಮಿಲನದಲ್ಲಿ ಆಟೋ ರಿಕ್ಷಾ ಚಾಲಕರಾಗಿ ವೃತ್ತಿಯನ್ನು ನಿರ್ವಹಿಸುತ್ತಿರುವ ಜಗನ್ನಾಥ ಪಿ.ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ ಸರ್ವಿಸ್ ನಿರ್ದೇಶಕ ಭಾಸ್ಕರ್ ಕೋಡಿಂಬಾಳರವರು ಮಾತನಾಡಿ, ಸಮಾಜಕ್ಕೆ ಆಟೋ ಚಾಲಕರ ಸೇವೆಯು ಬಹಳ ಅಗತ್ಯವಾಗಿದ್ದು ಇವರು ಸಮಾಜದ ಒಂದು ಅವಿಭಾಜ್ಯ ಅಂಗವಾಗಿ ಅಹೋ ರಾತ್ರಿಯಲ್ಲಿಯೂ ಕೂಡಾ ಇವರು ಆಪತ್ಬಾಂಧವರಾಗಿ ಸಮಾಜ ಸೇವೆಯನ್ನು ಮಾಡುತ್ತಿರುತ್ತಾರೆ. ಜಗನ್ನಾಥ ಪಿ ಇವರು ತಮ್ಮ ವೃತ್ತಿಯೊಂದಿಗೆ ಸಮಾಜ ಸೇವೆಯನ್ನು ಕೂಡ ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಇಂಥಹ ಸಮಾಜಮುಖಿ ಕೆಲಸಗಳನ್ನು ಮಾಡುವ ಪ್ರತಿಯೊಬ್ಬರನ್ನೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಗುರುತಿಸಿ ಅಭಿನಂದಿಸುತ್ತಾ ಬರುತ್ತಿದೆ ಎಂದು ಸಮಸ್ತ ಆಟೋ ಚಾಲಕರ ಸಮೂಹಕ್ಕೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ, ಸದಸ್ಯರಾದ ಸುಭಾಶ್ ರೈ ಬೆಳ್ಳಿಪ್ಪಾಡಿ, ಸುನಿಲ್ ಜಾಧವ್, ದೀಪಕ್ ಮಿನೇಜಸ್, ವಿಜಯ್ ಡಿ’ ಸೋಜಾ ಹಾಗೂ ಹಲವಾರು ಸ್ಥಳೀಯರು ಹಾಗೂ ರೋಟರಿ ಸಂಸ್ಥೆಯ ಸದಸ್ಯರ ಕುಟುಂಬಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here