ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳ ಆಯ್ಕೆಯನ್ನು ಜು.26ರಂದು ನಡೆಸಲಾಯಿತು. ಕಾಲೇಜಿನ ತರಗತಿಗಳ ಪ್ರತಿನಿಧಿಗಳ ಆಯ್ಕೆಯ ನಂತರ ನಡೆಸಿದ ವಿದ್ಯಾರ್ಥಿ ಸಂಘದ ರಚನೆಯಲ್ಲಿ ನಾಯಕನಾಗಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಅಂಶಿಕ್. ಜಿ.ಕೆ, ಕಾರ್ಯದರ್ಶಿಯಾಗಿ ಅಂತಿಮ ವರ್ಷದ ಸಿವಿಲ್ ವಿಭಾಗದ ಹೃತ್ವಿಕ್.ಪಿ.ಸಿ, ಸಾಂಸ್ಕೃತಿಕ ಹಾಗೂ ಸ್ಪರ್ಧಾ ವಿಭಾಗದ ಕಾರ್ಯದರ್ಶಿಯಾಗಿ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ಸುಮನ್ .ಡಿ, ಆಯುಧಪೂಜ ಕಾರ್ಯದರ್ಶಿಯಾಗಿ ಅಂತಿಮ ವರ್ಷದ ಆಟೋಮೊಬೈಲ್ ವಿಭಾಗದ ವರ್ಷಿತ್.ಬಿ., ಕ್ರೀಡಾ ಕಾರ್ಯದರ್ಶಿಯಾಗಿ ಅಂತಿಮ ವರ್ಷದ ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದ ದೀವಿತ್.ಶೆಟ್ಟಿ ಹಾಗೂ ಮಹಿಳಾ ಪ್ರತಿನಿಧಿಯಾಗಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಶ್ರಾವ್ಯ ಆಯ್ಕೆಯಾಗಿರುತ್ತಾರೆ.
ಪ್ರಾಂಶುಪಾಲರಾದ ಮುರಳಿಧರ್. ಯೆಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಚುನಾವಣಾ ಪ್ರಕ್ರಿಯೆಯನ್ನು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರವಿರಾಜ್ ಯೆಸ್ ಸಿವಿಲ್ ವಿಭಾಗದ ಮುಖ್ಯಸ್ಥರು , ಸುಧಾಕುಮಾರಿ ಪಿ.ಕೆ ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರು, ವಸುಂಧರ ರಾವ್ ಸೈನ್ಸ ವಿಭಾಗದ ಮುಖ್ಯಸ್ಥರು, ಹೇಮಮಾಲಿನಿ.ಪಿ. ಬೊಧಕರು ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗ , ಶಶಿಧರ ಗೌಡ.ವಿ. ಬೊಧಕರು ಮೆಕ್ಯಾನಿಕಲ್ ವಿಭಾಗ, ಅರುಣ್ ಕುಮಾರ್ ಬೊಧಕರು ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗ ಇವರುಗಳು ನಡೆಸಿಕೊಟ್ಟರು. ಆಯ್ಕೆಯಾದ ಪ್ರತಿನಿಧಿಗಳಿಗೆ ಆಡಳಿತ ಮಂಡಳಿಯವರು,ಪ್ರಾಂಶುಪಾಲರು,ಉಪನ್ಯಾಸಕ ವೃಂದದವರು ಅಭಿನಂದಿಸಿದರು.