ಪುತ್ತೂರು: ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ರಾಜ್ಯ ವ್ಯಾಪಿ ಕಾರ್ಯಕ್ಷೇತ್ರವನ್ನು ಹೊಂದಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಮಂಗಳೂರು ಶಾಖೆಯಲ್ಲಿ ಕಾರ್ಗಿಲ್ ವಿಜಯೋತ್ಸವದಂದು ನಿವೃತ್ತ ವೀರ ಯೋಧ ದಯಾನಂದ ನಾಯಕ್ ರವರನ್ನು ಸಹಕಾರಿಯ ವತಿಯಿಂದ ಸನ್ಮಾನಿಸಲಾಯಿತು.
ಸನ್ನಾನವನ್ನು ಸೀಕರಿಸಿ ಮಾತನಾಡಿದ ಅವರು ಈ ಸನ್ಮಾನವನ್ನು ದೇಶವನ್ನು ಕಾಯುವ ಎಲ್ಲಾ ಸೈನಿಕರಿಗೆ ಸಮರ್ಪಿಸಲಾಗುವುದು ಹಾಗೂ ಸಹಕಾರಿಯ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ICAI ಮಂಗಳೂರಿನ ಮಾಜಿ ಅಧ್ಯಕ್ಷ S S ನಾಯಕ್ ಮಾತನಾಡಿ ಯುವಕರಿಗೆ ಹಾಗೂ ಮಕ್ಕಳಿಗೆ ದೇಶಪ್ರೇಮವನ್ನು ಮೂಡಿಸುವ ಕಾರ್ಯಗಳು ನಿರಂತರವಾಗಿ ಆಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ವಹಿಸಿ ಸಹಕಾರಿಯು ನೀಡುವ ವಿವಿಧ ಸೇವೆಗಳ ಹಾಗೂ ದೇಶ ಕಾಯುವ ಯೋಧರ ಠೇವಣಿಗಳಿಗೆ ನೀಡಲಾಗುವ ವಿಶೇಷ ಬಡ್ದಿದರದ ಬಗ್ಗೆ ತಿಳಿಸಿದರು. ಸಹಕಾರಿಯ ನಿರ್ದೇಶಕ. ಜಯರಾಮ್ ಪಿ ಸದಸ್ಯ ಡಾ. ರಾಜೇಶ್ ಪಾದೆಕಲ್ , ಸತೀಶ್ ನಾಯಕ್, ಇವರು ಭಾಗವಹಿಸಿ ಶುಭ ಹಾರೈಸಿದರು. ಮಂಗಳೂರು ಶಾಖೆಯ ವ್ಯವಸ್ಥಾಪಕ ಪ್ರೇಮಚಂದ್ರ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಖೆಯು 16ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಪ್ರಯುಕ್ತ ಬೆಳಿಗ್ಗೆ ಗಣಪತಿ ಹವನ ಮತ್ತು ಲಕ್ಷ್ಮಿ ಪೂಜಾ ಕಾರ್ಯಕ್ರಮ ನಡೆಯಿತು.
ಸಹಕಾರಿಯಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ 4೦೦ ದಿನಗಳ ಠೇವಣಿಗೆ 8.70% ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ ವಿಧವೆಯರಿಗೆ ಮತ್ತು ಯೋಧರಿಗೆ ಮತ್ತು ನೋಂದಾಯಿತ ಸಂಘ ಸಂಸ್ಥಗಳಿಗೆ 9.10% ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಸ್ಪರ್ದಾತ್ಮಕ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ, ವಾಹನ ಸಾಲ, ಅಟೋ ಸಾಲ, ಗೃಹ ಸಾಲ, ಭೂ ಅಡಮಾನ ಸಾಲ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ.