*ಪುತ್ತೂರಿನ ಉದ್ಯಮ ಕ್ಷೇತ್ರಕ್ಕೆ ಬ್ರೈಟ್ ಭಾರತ್ ಮತ್ತೊಂದು ಗರಿ ಸೇರಿಸಿದೆ-ಅಶೋಕ್ ರೈ
*ಬ್ರೈಟ್ ಭಾರತ್ ಸಂಸ್ಥೆಯ ಯೋಜನೆಯನ್ನು ಜನತೆ ಸದುಪಯೋಗ ಪಡೆದುಕೊಳ್ಳಬೇಕು-ರೂಪೇಶ್ ಶೆಟ್ಟಿ
ಪುತ್ತೂರು: ಬ್ರೈಟ್ ಭಾರತ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ನೂತನ ಶೋರೂಂ ಕಲ್ಲಿಮಾರ್ ಕೀರ್ತನಾ ಪ್ಯಾರಡೈಸ್‌ನಲ್ಲಿ ಜು.29ರಂದು ಶುಭಾರಂಭಗೊಂಡಿತು. ಸಯ್ಯದ್ ಮುಝಮ್ಮಿಲ್ ತಂಙಳ್ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಜೆ ಅರುಣಾ ಕಲಾ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಪುತ್ತೂರಿನ ಉದ್ಯಮ ಕ್ಷೇತ್ರದ ಕಿರೀಟಕ್ಕೆ ಬ್ರೈಟ್ ಭಾರತ್ ಸಂಸ್ಥೆ ಮತ್ತೊಂದು ಗರಿಯನ್ನು ಸೇರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವ್ಯವಸ್ಥಿತವಾಗಿ ನಾವು ಮಾಡುವ ಯಾವುದೇ ಕಾರ್ಯ ಯಶಸ್ಸನ್ನು ತಂದುಕೊಡುತ್ತದೆ, ಬ್ರೈಟ್ ಭಾರತ್ ಸಂಸ್ಥೆಯವರು ಇದೀಗ ಚಿನ್ನದ ಮಳಿಗೆಯನ್ನು ಕೂಡಾ ಪ್ರಾರಂಭಿಸಿರುವುದ ಸಂತಸದ ವಿಚಾರ, ಚಿಕ್ಕ ಸಂಸ್ಥೆ ಮುಂದಕ್ಕೆ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು. ಪುತ್ತೂರಿನಲ್ಲಿ ಉದ್ಯಮಗಳು ಹೆಚ್ಚಾದಂತೆ ಜನರಿಗೆ ಕೆಲಸ ದೊರಕುತ್ತದೆ, ಈ ನಿಟ್ಟಿನಲ್ಲಿ ಪುತ್ತೂರಿಗೆ ಕೆಎಂಎಂ ಮಂಜೂರುಗೊಂಡಿದ್ದು ಮೆಡಿಕಲ್ ಕಾಲೇಜು ಸ್ಥಾಪನೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ನಾನು ಕೂಡಾ ಈ ಸಂಸ್ಥೆಯ ಸ್ಕೀಂಗೆ ಸೇರುತ್ತೇನೆ -ರೂಪೇಶ್ ಶೆಟ್ಟಿ
ಪ್ರೀಮಿಯಂ ಟೋಕನ್ ಲಾಂಚಿಂಗ್ ಮಾಡಿದ ಚಲನಚಿತ್ರ ನಟ ಬಿಗ್‌ಬಾಸ್ ವಿಜೇತ ರೂಪೇಶ್ ಶೆಟ್ಟಿ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆಯು ಜನರಿಗೆ ಉತ್ತಮ ಯೋಜನೆಯೊಂದನ್ನು ನೀಡಿದ್ದು ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು, ನಾನು ಕೂಡಾ ಈ ಸಂಸ್ಥೆಯ ಸ್ಕೀಂಗೆ ಸೇರುತ್ತೇನೆ ಎಂದು ಹೇಳಿದರು. ಬಡವನಾಗಿ ಹುಟ್ಟುವುದು ನಮ್ಮ ತಪ್ಪಲ್ಲ ಆದರೆ ಬಡವನಾಗಿ ಸಾಯುವುದು ನಮ್ಮ ತಪ್ಪು ಎನ್ನುವ ಮಾತಿನಂತೆ ನಮ್ಮ ಯಶಸ್ಸು ನಮ್ಮ ಪರಿಶ್ರಮದ ಮೇಲೆ ಅವಲಂಬಿತವಾಗಿತ್ತದೆ ಎಂದು ಹೇಳಿ ಬ್ರೈಟ್ ಭಾರತ್ ಸಂಸ್ಥೆ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಇವರಲ್ಲಿದೆ-ಅರವಿಂದ ಬೋಳಾರ್
ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಚಲನಚಿತ್ರ ನಟ ಅರವಿಂದ ಬೋಳಾರ್ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆ ಉತ್ತಮ ಸಂಸ್ಥೆಯಾಗಿದ್ದು ಇನ್ನೊಬ್ಬರಿಗೆ ಸಹಾಯ ಮಾಡುವ ದೊಡ್ಡ ಗುಣ ಇವರಲ್ಲಿದೆ, ಇವರಿಗೆ ಎಲ್ಲರೂ ಸಪೋರ್ಟ್ ಮಾಡಬೇಕು ಎಂದು ಹೇಳಿದರು. ಟೀಂ ವರ್ಕ್ ಚೆನ್ನಾಗಿದ್ದರೆ ಯಶಸ್ಸು ಸಿಗುತ್ತದೆ ಎಂದ ಅವರು ಬ್ರೈಟ್ ಭಾರತ್ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಅರವಿಂದ ಬೋಳಾರ್ ಅವರ ಕೆಲ ತುಳು ಡೈಲಾಗ್‌ಗಳು ಸೇರಿದ್ದವರನ್ನು ನಗೆಗಡಲಲ್ಲಿ ತೇಲಿಸಿತ್ತು.
ಬ್ರೈಟ್ ಭಾರತ್ ಸಂಸ್ಥೆಗೆ ಉಜ್ವಲ ಭವಿಷ್ಯವಿದೆ-ದೀಪಕ್ ರೈ
ಚಲನ ಚಿತ್ರ ನಟ ದೀಪಕ್ ರೈ ಪಾಣಾಜೆ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆ ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ವಿಚಾರ, ಈ ಸಂಸ್ಥೆಗೆ ಉಜ್ವಲ ಭವಿಷ್ಯವಿದೆ, ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಬ್ರೈಟ್ ಭಾರತ್ ಸಂಸ್ಥೆಗೆ ಎಲ್ಲರೂ ಸಹಕಾರ ನೀಡಿ-ಜನಸ್ನೇಹಿ ಯೋಗೀಶ್
ಬೆಂಗಳೂರು ಜನಸ್ನೇಹಿ ನಿರಾಶ್ರಿತರ ಆಶ್ರಮದ ಜನಸ್ನೇಹಿ ಯೋಗೀಶ್ ಮಾತನಾಡಿ ಹಲವು ವರ್ಷಗಳ ಹಿಂದೆ ಕಾರ್ಮಿಕನಾಗಿ ಪುತ್ತೂರಿಗೆ ಬಂದಿದ್ದ ನಾನು ಇಂದು ಅತಿಥಿಯಾಗಿ ಬಂದಿದ್ದೇನೆ ಎನ್ನಲು ತುಂಬ ಖುಷಿಯಾಗುತ್ತಿದೆ, ನಮ್ಮ ಆಶ್ರಮದಲ್ಲಿ 130 ಮಂದಿಯನ್ನು ನೋಡಿಕೊಳ್ಳುತ್ತಿದ್ದು ನಿಮ್ಮಂತವರ ಪ್ರೋತ್ಸಾಹದಿಂದ ಅದನ್ನು ಮುನ್ನಡೆಸುತ್ತಿದ್ದೇನೆ ಎಂದು ಹೇಳಿದರು. ಬ್ರೈಟ್ ಭಾರತ್ ಸಂಸ್ಥೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಅವರು ಹೇಳಿದರು.
ಬ್ರೈಟ್ ಭಾರತ್ ಎಲ್ಲರ ವಿಶ್ವಾಸವನ್ನು ಗಳಿಸಿದೆ-ಹೇಮನಾಥ ಶೆಟ್ಟಿ
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆ ಉತ್ತಮವಾಗಿ ಕಾರ್ಯಾಚರಿಸುತ್ತಿದ್ದು ಎಲ್ಲರ ವಿಶ್ವಾಸವನ್ನು ಕೂಡಾ ಗಳಿಸಿದೆ, ಇದರ ಪಾಲುದಾರರು ತಮ್ಮ ವ್ಯವಹಾರದ ಜೊತೆಗೆ ಸಮಾಜದ ಪರವಾಗಿಯೂ ಚಿಂತನೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಬ್ರೈಟ್ ಭಾರತ್ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಅವರು ಶುಭ ಹಾರೈಸಿದರು.
ವ್ಯವಹಾರದ ಜೊತೆ ಸಮಾಜಸೇವೆ ಶ್ಲಾಘನೀಯ-ರಾಧಾಕೃಷ್ಣ ಆಳ್ವ
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆಯ ಸ್ಕೀಂ ಯೋಜನೆಯಲ್ಲಿ ನಾನೂ ಸದಸ್ಯನಾಗಿದ್ದೇನೆ, ವ್ಯವಹಾರದ ಜೊತೆ ಸಮಾಜ ಸೇವೆಯನ್ನೂ ಮಾಡುತ್ತಿರುವ ಬ್ರೈಟ್ ಭಾರತ್‌ನವರ ಕಾರ್ಯ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ರೈಟ್ ಭಾರತ್ ಸಂಸ್ಥೆ ಪುತ್ತೂರಿಗೆ ಹೆಮ್ಮೆ-ಇಬ್ರಾಹಿಂ ಸಾಗರ್
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆ ಪುತ್ತೂರಿಗೆ ಹೆಮ್ಮೆ ತಂದಿದ್ದು ಬಡವರ ಬಗ್ಗೆ ಕಾಳಜಿಯಿರುವ ಈ ಸಂಸ್ಥೆ ಭವಿಷ್ಯದಲ್ಲಿ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಬ್ರೈಟ್ ಭಾರತ್ ನ್ಯಾಯಯುತವಾದ ಸೇವೆ ನೀಡುತ್ತಿದೆ-ಅಶ್ರಫ್ ಸವಣೂರು
ಸ್ವಾಗತಿಸಿದ ಬ್ರೈಟ್ ಭಾರತ್ ಸಂಸ್ಥೆಯ ಆಡಳಿತ ಪಾಲುದಾರ ಅಶ್ರಫ್ ಸವಣೂರು ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆ ಅತ್ಯಂತ ವ್ಯವಸ್ಥಿತವಾಗಿ, ಪಾರದರ್ಶಕವಾಗಿ ಮುನ್ನಡೆಯುತ್ತಿದ್ದು ಸಂಸ್ಥೆಯ ಸ್ಕೀಂಗೆ ಸೇರಿದ ಪ್ರತಿಯೊಬ್ಬರಿಗೂ ನ್ಯಾಯಯುತವಾದ ಸೇವೆಯನ್ನು ನೀಡುತ್ತಿದ್ದೇವೆ. ಬೀಡಿ ಕಟ್ಟುವ ಮಹಿಳೆಯರು ಕೂಡಾ ನಮ್ಮ ಸಂಸ್ಥೆಯಲ್ಲಿ ಸೇರಿದ್ದು ಆ ಎಲ್ಲ ಅರಿವು ನಮಗಿದೆ, ಹಾಗಾಗಿ ಉತ್ತಮ ಗುಣಮಟ್ಟದ ಸೇವೆಯನ್ನು ಸಂಸ್ಥೆ ನೀಡಲಿದೆ ಎಂದು ಹೇಳಿದರು.
ಪ್ರೀಮಿಯಂ ಟೋಕನ್ ಲಾಂಚಿಂಗ್:
ಕಾರ್ಯಕ್ರಮದಲ್ಲಿ ಬ್ರೈಟ್ ಭಾರತ್ ಪ್ರೀಮಿಯಂ ಟೋಕನ್ ಲಾಂಚಿಂಗ್ ನಡೆಯಲಿದೆ. ಸಂಸ್ಥೆಯ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಸೇವೆಯನ್ನು ನೀಡಲಿದ್ದು ಅದಕ್ಕಾಗಿ ಪ್ರೀಮಿಯಂ ಟೋಕನ್ ಲಾಂಚಿಂಗ್ ನಡೆಯಿತು. ನಟ ರೂಪೇಶ್ ಶೆಟ್ಟಿ ಪ್ರೀಮಿಯಂ ಟೋಕನ್ ಲಾಂಚಿಂಗ್ ಮಾಡಿದರು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 6366211677, 8050341688 ಮೊಬೈಲ್ ನಂಬರನ್ನು ಸಂಪರ್ಕೀಸಬಹುದು ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ.
ವಿಶೇಷ ಚೇತನ ಮಕ್ಕಳಿಗೆ ಉಡುಗೊರೆ:
ಪುತ್ತೂರು ಪ್ರಜ್ಞಾ ಆಶ್ರಮದ ವಿಶೇಷ ಚೇತನ ಮಕ್ಕಳನ್ನು ವೇದಿಕೆಗೆ ಬರ ಮಾಡಿಕೊಂಡು ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ಅವರಿಗೆ ಉಡುಗೊರೆ ನೀಡಲಾಯಿತು. ಬಳಿಕ ಆಶ್ರಮಕ್ಕೆ ಬ್ರೈಟ್ ಭಾರತ್ ವತಿಯಿಂದ ನಗದು ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಪ್ರಜ್ಞಾ ಆಶ್ರಮದ ಅನ್ನಪ್ಪ ಅವರು ಚೆಕ್ ಸ್ವೀಕರಿಸಿದರು.
ಜನಸ್ನೇಹಿ ಆಶ್ರಮಕ್ಕೆ ನೆರವು:
ಬ್ರೈಟ್ ಭಾರತ್ ವತಿಯಿಂದ ಜನ ಸ್ನೇಹಿ ಯೋಗೀಶ್ ಅವರು ನಡೆಸುತ್ತಿರುವ ಜನಸ್ನೇಹಿ ಆಶ್ರಮಕ್ಕೆ ನೆರವಿನ ಚೆಕ್‌ನ್ನು ವಿತರಿಸಲಾಯಿತು. ಶಾಸಕ ಅಶೊಕ್ ಕುಮಾರ್ ರೈ ಹಸ್ತಾಂತರಿಸಿದರು. ಜನಸ್ನೇಹಿ ಯೋಗೀಶ್ ಅವರು ಚೆಕ್ ಸ್ವೀಕರಿಸಿದರು.
ಉಚಿತ ಡ್ರಾ:
ಬ್ರೈಟ್ ಭಾರತ್ ಸೀಸನ್-2 ರಲ್ಲಿ ಹೆಸರು ನೊಂದಾಯಿಸಿಕೊಂಡವರಿಗೆ ವಿಶೇಷ ಕೊಡುಗೆಯಾಗಿ ಉಚಿತ ಡ್ರಾ ನಡೆಸಲಾಯಿತು. ದ್ವಿಚಕ್ರ ವಾಹನ, ಚಿನ್ನ ಬಹುಮಾನದ ಡ್ರಾವನ್ನು ಅತಿಥಿಗಳು ನಡೆಸಿಕೊಟ್ಟರು.
ವೇದಿಕೆಯಲ್ಲಿ ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ, ಉದ್ಯಮಿ ಪ್ರಸನ್ನ ಶೆಟ್ಟಿ ಸಿಝ್ಲರ್, ರಾಜಕೀಯ ಮುಖಂಡ ಶಾಕಿರ್ ಅಳಕೆಮಜಲು, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ವೈದ್ಯ ಡಾ. ಪ್ರಭು ಎನ್, ಪತ್ರಕರ್ತ ಯೂಸುಫ್ ರೆಂಜಲಾಡಿ, ನ್ಯಾಯವಾದಿ ಅಸ್ಗರ್ ಮುಡಿಪು, ಸಾಮಾಜಿಕ ಕಾರ್ಯಕರ್ತ ನವೀನ್ ಕುಲಾಲ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಇಂಜಿನಿಯರ್ ಶಮೀರ್ ಚೆನ್ನಾರ್, ಉದ್ಯಮಿ ಹಸೈನಾರ್ ಕೂರ್ನಡ್ಕ, ಪುತ್ತೂರು ಕ್ಯಾಪಿಟಲ್ ಸ್ಪೇಸ್‌ನ ಫಾರೂಕ್, ಎಸ್‌ಡಿಟಿಯು ಪತ್ತೂರು ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞಿ ಬಾಬಾ, ನಗರಸಭಾ ನಾಮನಿರ್ದೇಶಿತ ಸದಸ್ಯ ಶರೀಫ್ ಬಲ್ನಾಡ್, ಸಾಮಾಜಿಕ ಕಾರ್ಯಕರ್ತ ಮೋನು ಬಪ್ಪಳಿಗೆ, ಉದ್ಯಮಿ ಮಹಮ್ಮದ್ ಫರಂಗಿಪೇಟೆ ಉಪಸ್ಥಿತರಿದ್ದರು.
ಖ್ಯಾತ ನಿರೂಪಕ ವಿ.ಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು. ಬ್ರೈಟ್ ಭಾರತ್ ಸಂಸ್ಥೆಯ ಆಡಳಿತ ಪಾಲುದಾರರು, ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.