ನಕಲಿ ಚಿನ್ನಾಭರಣ ಅಡವಿಟ್ಟು ಸಹಕಾರಿ ಸಂಸ್ಥೆಯಿಂದ 9.25 ಲಕ್ಷ ರೂ.ಸಾಲ ಪಡೆದು ವಂಚನೆ

0

ಕಾವೂರು ವಂಚನೆ ಪ್ರಕರಣದ ಆರೋಪಿ ವಿರುದ್ಧ ಪ್ರಕರಣ

ಪುತ್ತೂರು:ಕಾವೂರಿನಲ್ಲಿ ಸಹಕಾರ ಸಂಘವೊಂದರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ ಮಾಡಿರುವ ಪ್ರಕರಣದ ಆರೋಪಿಯೋರ್ವ ಇಲ್ಲಿನ ಸಹಕಾರಿ ಸಂಘವೊಂದರಲ್ಲಿಯೂ ನಕಲಿ ಚಿನ್ನಾಭರಣ ಅಡವಿಟ್ಟು 9.25 ಲಕ್ಷ ರೂಪಾಯಿ ವಂಚಿಸಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಂದೂರು ನಿವಾಸಿ ಅಬ್ದುಲ್ ರಮೀಝ್ ಎಂಬಾತ ಪುತ್ತೂರಿನ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣಗಳನ್ನು ಅಸಲಿಯೆಂದು ನಂಬಿಸಿ ಅಡವಿಟ್ಟು ವಂಚನೆ ಮಾಡಿರುವುದಾಗಿ ಸಂಘದ ಶಾಖಾ ಮ್ಯಾನೇಜರ್ ಪವಿತ್ರ ಎನ್ ಅವರು ದೂರು ನೀಡಿದ್ದಾರೆ.

‘ಅಬ್ದುಲ್ ರಮೀಝ್ ಅ.4ರಂದು ಬಂದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.17.100 ಗ್ರಾಂ ತೂಕದ 1 ಬ್ರಾಸ್ಲೈಟ್ ಮತ್ತು 34,390 ಗ್ರಾಂ ತೂಕದ 2 ಚೈನ್ ನೀಡಿದ್ದು ತಾನು ಶಾಖೆಯ ಚಿನ್ನ ಪರೀಕ್ಷಕನನ್ನು ಬರಮಾಡಿಕೊಂಡು ಅವರಲ್ಲಿ ಚಿನ್ನವನ್ನು ಪರೀಕ್ಷೆಗೊಳಪಡಿಸಿ, ಅವರ ಪರಿಶೀಲನೆ ವರದಿಯ ಅಧಾರದಲ್ಲಿ ತೂಕದ ಚಿನ್ನಾಭರಣದಲ್ಲಿ ವಾತಿ ಕಳೆದು 51 ಗ್ರಾಂ ತೂಕವಿದ್ದುದರಿಂದ 4,84,500 ಬಾಜಾರು ಧಾರಣೆಯಲ್ಲಿ 4,50,000 ನಗದು ಹಣವನ್ನು ಸಾಲವಾಗಿ ಆರೋಪಿತನಿಗೆ ನೀಡಲಾಗಿ ರೂ.1,99,000ವನ್ನು ನಗದು ರೂಪದಲ್ಲಿಯೂ ಉಳಿದ ರೂ.2,51,000ವನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರದ ಪುತ್ತೂರು‌ ಶಾಖೆಯಲ್ಲಿನ ಆರೋಪಿಯ ಖಾತೆಗೆ ವರ್ಗಾಯಿಸಲಾಗಿತ್ತು. ಅ.8ರಂದು ಆರೋಪಿ ಅಬ್ದುಲ್ ರಮೀಜ್ ವಾಪಸ್ಸು ಬಂದು 52.870 ಗ್ರಾಂ ತೂಕದ ಕಲ್ಲು ಇರುವ ಕಾಲು ಚೈನ್ ಒಂದು ಜೊತೆ ಮತ್ತು 15.300 ಗ್ರಾಂ ತೂಕದ 1 ಚೈನ್ ತಂದು ಅಡಮಾನವಿರಿಸಿದ್ದು ತಾನು ಚಿನ್ನ ಪರೀಕ್ಷಕನ ಮೂಲಕ ಚಿನ್ನವನ್ನು ಪರೀಕ್ಷಿಸಿ ಅದರ ಪರಿಶೀಲನೆ ವರದಿಯ ಆಧಾರದಲ್ಲಿ ಸದ್ರಿ ಚಿನ್ನಾಭರಣದಲ್ಲಿ ವಾಶಿ ಕಳೆದು 53.170 ತೂಕವಿತ್ತು.ಅದು ಆಸಲಿ ಚಿನ್ನವೆಂದು ಚಿನ್ನ ಪರೀಕ್ಷಕನ ಪರಿಶೀಲನೆ ಆಧಾರದಲ್ಲಿ ಪಡೆದುಕೊಂಡು ರೂ.5,58,285 ಬಾಜಾರು ಧಾರಣೆಯಲ್ಲಿ ರೂ.4,75,000 ಸಾಲವಾಗಿ ಆರೋಪಿತನಿಗೆ ನೀಡಿ ಈ ಪೈಕಿ ರೂ.1,99,000 ನಗದು ರೂಪದಲ್ಲಿ ಮತ್ತು ಉಳಿದ 2,67,000ವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು.ಈ ರೀತಿ ಆರೋಪಿಯು ಒಟ್ಟು 104.170 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 9.25 ಲಕ್ಷ ರೂ ಸಾಲವಾಗಿ ಪಡೆದುಕೊಂಡಿದ್ದಾರೆ. ಆರೋಪಿ ಅಬ್ದುಲ್ ರಮೀಜ್ ಮತ್ತು ಇತರರು ಸೇರಿಕೊಂಡು ನಕಲಿ ಚಿನ್ನಾಭರಣಗಳನ್ನು ಅಡವಿರಿಸಿ ಬೇರೊಂದು ಸಹಕಾರಿ ಸಂಘಕ್ಕೆ ವಂಚನೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿರುವ ಬಗ್ಗೆ ಪತ್ರಿಕಾ ವರದಿಯನ್ನು ಗಮನಿಸಿ, ಅನುಮಾನ ಬಂದ ಹಿನ್ನೆಲೆಯಲ್ಲಿ ಕೇಂದ್ರ ಕಛೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಒಪ್ಪಿಗೆ ಪಡೆದು ಅಬ್ದುಲ್ ರಮೀಜ್‌ ರವರು ಅಡಮಾನ ಇರಿಸಿದ ಎಲ್ಲಾ ಚಿನ್ನಾಭರಣಗಳನ್ನು ಮಂಗಳೂರು ಟೆಸ್ಟಿಂಗ್ ಸೆಂಟರ್ ನಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಅವುಗಳು ನಕಲಿ ಚಿನ್ನಾಭರಣಗಳೆಂದು ತಿಳಿದು ಬಂದಿರುತ್ತದೆ’ ಎಂದು ಶಾಖಾ ವ್ಯವಸ್ಥಾಪಕಿ ಪವಿತ್ರ ಎನ್.ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಅವರ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಕಲಂ 318(4), 316(2) ಬಿಎನ್ಎಸ್ 2023ಯಂತೆ ಪ್ರಕರಣ ದಾಖಲಾಗಿರುತ್ತದೆ. ಬೆಳ್ತಂಗಡಿಯ ಸಹಕಾರಿ ಸಂಘವೊಂದರಲ್ಲಿಯೂ ಈ ರೀತಿ ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿರುವುದಾಗಿ ಆರೋಪಿ ಅಬ್ದುಲ್ ರಮೀಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾವೂರಿನಲ್ಲಿ ಆರೋಪಿಗಳ ಬಂಧನ
ಮಂಗಳೂರು-ಕಾವೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನಾಭರಣ ಅಡವಿಟ್ಟು 6.24 ಲಕ್ಷ ರೂ. ವಂಚಿಸಿದ್ದ ಆರೋಪದಲ್ಲಿ ಬೆಳಂದೂರಿನ ಅಬ್ದುಲ್ ರಮೀಝ್ ಹಾಗೂ ಆಕಾಶ ಭವನದ ಆನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39) ಮತ್ತು ನಂತೂರು ಬಿಕರ್ನಕಟ್ಟೆಯ ನಿವಾಸಿ ಮೊಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್ (34) ಎಂಬವರನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಆರೋಪಿ ಅಬ್ದುಲ್ ರಮೀಝ್ ವಿರುದ್ಧ ಇದೀಗ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಾಡಿವಾರಂಟ್ ಮೇಲೆ ಪುತ್ತೂರು ನಗರ ಪೊಲೀಸರು ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here