ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ಶಿಕ್ಷಕಿ ಪ್ರವೀಣ ಕುಮಾರಿ, ಜವಾನ ಪುರಂದರ ನಾಯ್ಕರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

0

ನಿಡ್ಪಳ್ಳಿ; ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ  ಸುಮಾರು 30 ವರ್ಷಗಳ ಕಾಲ ಹಿಂದಿ ಭಾಷಾ ಶಿಕ್ಷಕಿಯಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಪ್ರವೀಣ ಕುಮಾರಿ ಹಾಗೂ 32 ವರ್ಷಗಳಿಂದ ಜವಾನರಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ ಪುರಂದರ ನಾಯ್ಕ.ಡಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜು.31 ರಂದು ಶಾಲಾ ಸಭಾಭವನದಲ್ಲಿ ನಡೆಯಿತು.

ಶಾಲೆಗೆ ತುಂಬಲಾರದ ನಷ್ಟ;
ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಮಾತನಾಡಿ ಶಿಕ್ಷಕಿ ಪ್ರವೀಣ ಕುಮಾರಿಯವರು ಶಾಲೆಯಲ್ಲಿ ಅಲ್ ರೌಂಡರ್ ಆಗಿದ್ದರು. ಶಾಲೆಯ ಎಲ್ಲಾ ಚಟುವಟಿಕೆಗಳಿಗೂ ಅವರನ್ನೆ ಅವಲಂಬಿಸಿ ಅವರ ಮಾರ್ಗದರ್ಶನ ಪಡೆಯುತ್ತಿದ್ದು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.ನಾವು ಯಾವುದರಲ್ಲೂ ಸೋಲಬಾರದು ಎಂಬ ಮನೋಭಾವದರು ಮಾತ್ರವಲ್ಲ ನಮಗೆಲ್ಲಾ ಅಮ್ಮನ ಸ್ಥಾನ ನೀಡಿದವರು ಉತ್ತಮ ಗುಣದವರಾಗಿದ್ದು ಅವರು ಶಾಲೆಯಿಂದ ನಿರ್ಗಮಿಸುತ್ತಿರುವುದು ಶಾಲೆಗೆ ತುಂಬಲಾರದ ನಷ್ಟ. ಅವರ ಆತ್ಮೀಯತೆ, ಸರಳ ಸಜ್ಜನಿಕೆ ಮತ್ತು ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುವ ವ್ಯಕ್ತಿಯಾಗಿದ್ದರು ಎಂದರು.

 ನಿವೃತ್ತರಾದ ಜವಾನ ಪುರಂದರ ನಾಯ್ಕರವರು ಕಾಯಕವೇ ಕೈಲಾಸ ಎಂಬ ಮಾತಿನಂತೆ ಶಾಲೆಯ ಎಲ್ಲಾ ಕೆಲಸ ಕಾರ್ಯಗಳಲ್ಲೂ ನಿಷ್ಠೆ ಪ್ರಾಮಾಣಿಕವಾಗಿ ಕೆಲಸ ಮಾಡಿದವರು. ಅವರನ್ನು ಎಂದಿಗೂ ಮರೆಯುವಂತಿಲ್ಲ. ಅವರ ಸೇವೆ ಇನ್ನೂ ಈ ಶಾಲೆಗೆ ಅಗತ್ಯ ಇದೆ ಎಂದು ಹೇಳಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.ಸಂಸ್ಕ್ರತ ಶಿಕ್ಷಕಿ ಶೋಭಾ ನಿವೃತ್ತರ ಗುಣಗಾನ ಮಾಡಿ ಶುಭ ಹಾರೈಸಿದರು.

 ಅತಿಥಿಗಳಾಗಿ ಭಾಗವಹಿಸಿದ ಉಪ್ಪಳಿಗೆ ಪ್ರೌಢಶಾಲಾ ಶಿಕ್ಷಕಿ ಶ್ಯಾಮಲ, ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಎನ್.ಸಂಜೀವ ಶೆಟ್ಟಿ, ದಯಾನಂದ ರೈ ಕೋರ್ಮಂಡ, ನಿವೃತ್ತ ಮುಖ್ಯ ಗುರು ವೆಂಕಟ್ರಮಣ ಭಟ್ ಮಂಜುಳಗಿರಿ, ನಿವೃತ್ತ ಮುಖ್ಯ ಶಿಕ್ಷಕಿ ಮಾಲತಿ.ಡಿ, ನಿವೃತ್ತ ಚಿತ್ರಕಲಾ ಶಿಕ್ಷಕ ಐ. ಗೋಪಾಲಕೃಷ್ಣ ರಾವ್, ವಿವೇಕಾನಂದ ಪದವಿ ಕಾಲೇಜಿನ ಸಂಸ್ಕ್ರತ ವಿಭಾಗದ ಮುಖ್ಯಸ್ಥ ಶ್ರೀಶ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಅರ್ ನಿವೃತ್ತರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಶುಭ ಹಾರೈಸಿದರು. ತಾಲೂಕು ಶಿಕ್ಷಣ ಸಂಯೋಜಕ ಹರಿಪ್ರಸಾದ್, ಅಕ್ಷರ ದಾಸೋಹದ ನಿರ್ದೇಶಕ ವಿಷ್ಣು ಪ್ರಸಾದ್, ಬೆಟ್ಟಂಪಾಡಿ ಕ್ಲಸ್ಟರ್ ಸಿ.ಅರ್.ಪಿ ಪರಮೇಶ್ವರಿ ಪ್ರಸಾದ್, ನವೋದಯ ವಿದ್ಯಾ ಸಮಿತಿಯ ಕಾರ್ಯದರ್ಶಿ ನಾರಾಯಣ ಭಟ್ ಸಹಕಾರವನ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಾದ ನವಾಜ್, ಶ್ರೀಜಾ, ಆಯಿಷತ್ ಸಮ್ನಾ ಅನಿಸಿಕೆ ವ್ಯಕ್ತ ಪಡಿಸಿದರು. ಹಿರಿಯ ವಿದ್ಯಾರ್ಥಿಗಳಾದ ವಿನಯ್, ಪವಿತ್ರ ಅನಿಸಿಕೆ ವ್ಯಕ್ತ ಪಡಿಸಿದರು. ಸನ್ಮಾನಗೊಂಡ ಶಿಕ್ಷಕಿ ಪ್ರವೀಣ ಕುಮಾರಿ ಮತ್ತು ಜವಾನ ಪುರಂದರ ನಾಯ್ಕ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

 ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಬಟ್ಯಮೂಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹಶಿಕ್ಷಕಿ ಭುವನೇಶ್ವರಿ ಮತ್ತು ಗೌತಮಿ ಅಭಿನಂದನಾ ಪತ್ರ ವಾಚಿಸಿದರು.ಸಹಶಿಕ್ಷಕಿ ಸುಮಂಗಲ ವಂದಿಸಿ ಶಿಕ್ಷಕ ರಾಧಾಕೃಷ್ಣ ಅರ್.ಕೋಡಿ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್, ಶೋಭಾಲತಾ, ಸದಸ್ಯ ದೇವಣ್ಣ ನಾಯ್ಕ, ಶಾಲಾ ನಾಯಕ ಯತೀನ್, ಉಪ ನಾಯಕ ನವಾಜ್, ವಿದ್ಯಾರ್ಥಿಗಳಾದ ಶಮಿತಾ, ರಿತೇಶ್ ಡಿ’ ಸೋಜಾ, ಸವಿತಾ ಅತಿಥಿಗಳಿಗೆ ಗುಲಾಬಿ ನೀಡಿ ಗೌರವಿಸಿದರು.ಶಾಲಾ ಸಿಬ್ಬಂದಿ ನಾರಾಯಣ ಬನ್ನಿಂತಾಯ, ಶಿಕ್ಷಕಿಯರಾದ ದೀಕ್ಷಾ, ಅಂಕಿತಾ ಮತ್ತೀತರರು ಸಹಕರಿಸಿದರು.

 ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಶಿಕ್ಷಕ ಮನೋಹರ ಭಟ್, ವೆಂಕಟ್ರಮಣ ಉಚ್ಚಿಲ್ಲಾಯ, ಶಿಕ್ಷಕ ಪ್ರಶಾಂತ್ ಕುಮಾರ್ ರೈ ಎನ್, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪವಿತ್ರ ಡಿ, ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಶ್ಯಾಂ ಪ್ರಸಾದ್ ಮಜಲುಗುಡ್ಡೆ,ಚಂದ್ರನ್ ತಲೆಪ್ಪಾಡಿ, ಮಾಜಿ ಉಪಾಧ್ಯಕ್ಷೆ ಜಲಜಾಕ್ಷಿ, ಶಾಲಾ ನಿವೃತ್ತ ಜವಾನ ರಾಮ ನಾಯ್ಕ ದೈಯ್ಯಾರಡ್ಕ,ಜುಬೈದಾ,  ಪ್ರವೀಣ ಕುಮಾರಿಯವರ ಮನೆಯವರು, ಪುರಂದರ ನಾಯ್ಕರ ಮನೆಯವರು, ಶಾಲಾ ಪೋಷಕರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಶಾಲಾ ಹಿರಿಯ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸನ್ಮಾನಗಳ ಮಹಾಪೂರ;
ಪ್ರವೀಣ ಕುಮಾರಿ ಮತ್ತು ಪುರಂದರ ನಾಯ್ಕ ಶಾರದಾ ದಂಪತಿಗಳಿಗೆ ಸನ್ಮಾನಗಳ ಮಹಾಪೂರವೆ ಹರಿದು ಬಂತು.ಶಾಲಾ ಆಡಳಿತ ಮಂಡಳಿ ವತಿಯಿಂದ,ಶಾಲಾ ಶಿಕ್ಷಕ ರಕ್ಷಕ ಸಂಘ,  ತಾಲೂಕು ಸಹಶಿಕ್ಷಕರ ಸಂಘ, ನಿವೃತ್ತ ಡ್ರಾಯಿಂಗ್ ಶಿಕ್ಷಕ ಐ. ಗೋಪಾಲಕೃಷ್ಣ ರಾವ್ ದಂಪತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ,ನಿವೃತ್ತ ಮುಖ್ಯ ಶಿಕ್ಷಕಿ ಮಾಲತಿ.ಡಿ,ಚಂದ್ರನ್ ತಲೆಪ್ಪಾಡಿ,  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ, ಹಿರಿಯ ವಿದ್ಯಾರ್ಥಿಗಳಾದ ವಿನಯ್, ಮಾಲತಿ, ಶಾಲೆಯ ಪ್ರತಿ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಗೌರವಾರ್ಪಣೆ ಮಾಡಲಾಯಿತು.

   (ಚಿತ್ರ; ಶ್ರೀಹರಿ ರೆಂಜ)

LEAVE A REPLY

Please enter your comment!
Please enter your name here