34 ನೆಕ್ಕಿಲಾಡಿ ಉಡ್ಲದಕೋಡಿಯಲ್ಲಿ ಗುಡ್ಡ ಕುಸಿತ – ಮಣ್ಣಿನಡಿ ಸಿಲುಕಿದ ವಾಹನಗಳು

0

ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಆನೆಬೈಲು ಬಳಿಯ ಉಡ್ಲದಕೋಡಿ ಎಂಬಲ್ಲಿ ಮನೆಯ ಮೇಲೆ ಗುಡ್ಡಕುಸಿದಿದ್ದು, ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ.

ವಾಹನಗಳು ಮಣ್ಣಿನಡಿ ಸಿಲುಕಿವೆ.
ಇದರಿಂದಾಗಿ ಇಲ್ಲಿನ ನಿವಾಸಿ ವಿಶ್ವನಾಥ ನಾಯ್ಕ ಎಂಬವರಿಗೆ ಸೇರಿದ ಮನೆಯ ಹಿಂದಿನ ಗುಡ್ಡ ನಸುಕಿನ ಜಾವ 4:15ರ ಸುಮಾರಿಗೆ ಕುಸಿದು ಬಿದ್ದಿದೆ. ಇದರಿಂದ ಮನೆಯ ಹಿಂಬದಿಯ ಸಿಮೆಂಟ್ ಶೀಟ್ ಹಾಸಿದ್ದ ಕೋಣೆಗೆ ಸಂಪೂರ್ಣ ಹಾನಿಯಾಗಿದೆ. ಇಲ್ಲಿ ನಿಲ್ಲಿಸಲಾಗಿದ್ದ ಕಾರು, ದ್ವಿಚಕ್ರ ವಾಹನ ಮಣ್ಣಿನಡಿಗೆ ಸಿಲುಕಿದೆ. ಸ್ಥಳಕ್ಕೆ 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯ ಪ್ರಶಾಂತ್ ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://youtu.be/OsetSQ0FSKE

LEAVE A REPLY

Please enter your comment!
Please enter your name here