ತಿಂಗಳಾಡಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೃಷ್ಣೇಗೌಡರಿಗೆ ಪಾಂಡವಪುರದಲ್ಲಿ ವಿದಾಯ ಸಮಾರಂಭ

0

ಕೃಷ್ಣೇ ಗೌಡರು ಶಾರದೆಯ ಕರುಣೆಯ ಕಡಲಲ್ಲಿ ಶ್ರೇಷ್ಠ ಮುತ್ತು: ಕಡಮಜಲು ಸುಭಾಷ್ ರೈ

ಪುತ್ತೂರು: 1989ರಲ್ಲಿ ಕೆದಂಬಾಡಿ ಗ್ರಾಮದ ತಿಂಗಳಾಡಿ ಶಾಲೆಗೆ ಪದವೀಧರ ಮುಖ್ಯ ಶಿಕ್ಷಕರಾಗಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ ಎರಡು ವರ್ಷ ಇಲ್ಲಿ ಕಾರ್ಯನಿರ್ವಹಿಸಿ ಮಂಡ್ಯ ಜಿಲ್ಲೆಯ ಸರಕಾರಿ ಪ.ಪೂ ಕಾಲೇಜಿನಲ್ಲಿ ನಿವೃತ್ತಿ ಹೊಂದಿದ್ದ ಮಳವಳ್ಳಿ ಕೃಷ್ಣೇ ಗೌಡರಿಗೆ ಬೀಳ್ಕೊಡುಗೆ ಸಮಾರಂಭ ಹಲವಾರು ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಜು.31ರಂದು ಪಾಂಡವಪುರದಲ್ಲಿ ಜರಗಿತು.

ತಿಂಗಳಾಡಿ ಶಾಲೆಯಲ್ಲಿ 1989ರಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಕಡಮಜಲು ಸುಭಾಷ್ ರೈ ಪಾಂಡವಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃಷ್ಣೇ ಗೌಡರು ತನ್ನ ಸುಧೀರ್ಘವಾದ 35 ವರ್ಷಗಳ ಸಾರ್ಥಕ ಸೇವೆಯಿಂದ ಆದರ್ಶ ಶಿಕ್ಷಕರಾಗಿ ಹಾಗೂ ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ಶಾರದೆಯ ಕರುಣೆಯ ಮಡಿಲಲ್ಲಿ ಶ್ರೇಷ್ಠ ಮುತ್ತು ಆಗಿ ಬೆಳಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.
ಕೃಷ್ಣೇ ಗೌಡರವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಇದರ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಪ್ರಕೃತ ಮೈಸೂರು ಜಿಲ್ಲಾ ವಿಜ್ಞಾನ ಪೌಂಡೇಶನ್ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮದ ನಿವಾಸಿಯಾಗಿರುವ ಇವರು ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇದರ ಅಧ್ಯಕ್ಷರಾಗಿ ಕಡಮಜಲು ಸುಭಾಷ್ ರೈಯವರು 6 ವರ್ಷದ ಸೇವಾವಧಿಯಲ್ಲಿ ಕೃಷ್ಣೇ ಗೌಡರ ಪ್ರೋತ್ಸಾಹ ಅನನ್ಯವಾಗಿತ್ತು. ವಿದಾಯ ಸಮಾರಂಭದಲ್ಲಿ ಪ್ರೀತಿ ಸುಭಾಷ್ ರೈ ಭಾಗವಹಿಸಿ ಕೃಷ್ಣೇ ಗೌಡರನ್ನು ಸಮಸ್ತ ದ.ಕ ಜಿಲ್ಲೆಯ ಪರವಾಗಿ ಆದರಗಳೊಂದಿಗೆ ಸನ್ಮಾನಿಸಿದರು. ಈ ಸಂದಭದಲ್ಲಿ ಮೈಸೂರು ಕ್ರಿಕೆಟ್ ಅಸೋಸಿಯೇಶನ್ ಸಂಚಾಲಕರಾಗಿ ಸೇವೆ ಸಲ್ಲಿಸಿದ ಕಲ್ಕಾರು ಸುಧಾಕರ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here