ಕೋಡಿಂಬಾಡಿ ರೈ ಎಸ್ಟೇಟ್ ಸಮೀಪ ಧರೆ ಕುಸಿತ- ರಸ್ತೆ, ವಿದ್ಯುತ್ ಕಂಬಗಳಿಗೆ ಹಾನಿ

0

ಪುತ್ತೂರು: ಪುತ್ತೂರು- ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಗ್ರಾಮದ ರೈ ಎಸ್ಟೇಟ್ ಸಮೀಪ ಹೆದ್ದಾರಿಯ ಬದಿಯ ಧರೆ ಕುಸಿದಿದ್ದು ರಸ್ತೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ.
ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಡಿಂಬಾಡಿಯಲ್ಲಿರುವ ರೈ ಎಸ್ಟೇಟ್ ಸಮೀಪ ಚತುಷ್ಪಥ ರಸ್ತೆಯ ಒಂದು ಭಾಗದಲ್ಲಿ ಬೃಹತ್ ಧರೆಯು ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ರಸ್ತೆಗೆ ಹಾಗೂ ಎರಡು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. ಗುಡ್ಡ ಇನ್ನಷ್ಟು ಕುಸಿಯು ಭೀತಿಯಲ್ಲಿದ್ದು ರಸ್ತೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಲಿದೆ.
ಹಾನಿಯುಂಟಾದ ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ.

LEAVE A REPLY

Please enter your comment!
Please enter your name here