ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಸವಣೂರು ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಬಾಲಕ,ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಗ್ರಾಮಪಂಚಾಯತ್ ಸದಸ್ಯೆ ಪದ್ಮಾವತಿ ಪಂದ್ಯಾಟವನ್ನು ಉದ್ಘಾಟಿಸಿದರು. ಎಸ್ ಡಿ ಎಮ್ ಸಿ ಅಧ್ಯಕ್ಷೆ ಅನುಪಮ ಅಧ್ಯಕ್ಷತೆ ವಹಿಸಿದ್ದರು.

ನರಿಮೊಗರು ಕ್ಲಸ್ಟರ್ ಸಿ ಆರ್ ಪಿ ಪರಮೇಶ್ವರಿ,ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯ ವಿದ್ಯಾರ್ಥಿ ಹರ್ಷ ಗುತ್ತು, ಎಸ್ ಡಿ ಎಂ ಸಿ ಉಪಾಧ್ಯಕ್ಷ ರಝಾಕ್, ಸದಸ್ಯರಾದ ದಿನೇಶ್ ಶೆಟ್ಟಿ, ಸುರೇಶ್ ಗಂಡಿ, ಸಮೀರ್, ಹರೀಶ್, ಆನಂದಗೌಡ, ರತ್ನಾವತಿ, ಚಿತ್ರಾ, ಭವ್ಯಾ, ಶಾಂಬಲತಾ, ರಾಜೇಶ್ವರಿ,ಅಡುಗೆ ಸಿಬ್ಬಂದಿ ಪಾರ್ವತಿ, ಉಪಸ್ಥಿತರಿದ್ದರು. ತೀರ್ಪುಗಾರರಾದ ಮೋನಪ್ಪ ಪಟ್ಟೆ , ನವೀನ್ ರೈ ಕೆಯ್ಯೂರು, ಬಾಲಕೃಷ್ಣ ಕೆ, ಕೃಷ್ಣ ಪ್ರಸಾದ್ ಕೆ ಪಿ ಎಸ್ ಕುಂಬ್ರ, ಮಂಜುನಾಥ ಸಾಂದೀಪಿನಿ ವಿದ್ಯಾಸಂಸ್ಥೆಗಳು ನರಿಮೊಗರು, ವನಿತಾ ಮುಂಡೂರು, ವನಿತಾ ಪ್ರಗತಿ ಕಾಣಿಯೂರು, ಲಕ್ಷ್ಮಿ ಕೆ ಟಿ .‌ಸ ಪ ಪೂ ಕಾ ಕಾಣಿಯೂರು, ಸುಲೋಚನ ಮಂಜುನಾಥ ನಗರ, ಸಿದ್ದಲಿಂಗಮ್ಮ ಭಕ್ತಕೋಡಿ, ಶ್ರಿಲತಾ ನರಿಮೊಗರು, ರಾಧಾಕೃಷ್ಣ ಸರಸ್ವತಿ ವಿದ್ಯಾಮಂದಿರ ನರಿಮೊಗರು, ಜಯಚಂದ್ರ ಪ್ರಗತಿ ಕಾಣಿಯೂರು ಪಂದ್ಯಾಟವನ್ನು ನಡೆಸಿಕೊಟ್ಟರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕರಾದ ಶೋಬಾ,ಕವಿತಾ, ಸೌಮ್ಯ ಸವಿತಾ,ಸಂಚನ ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ಸಹಕರಿಸಿದರು.

ಬಾಲಕರ ವಿಭಾಗದಲ್ಲಿ ವೀರಮಂಗಲ ಶಾಲೆ ಪ್ರಥಮ ಸ್ಥಾನವನ್ನು, ಶಾಂತಿಗೋಡು ಶಾಲೆ ದ್ವಿತೀಯ ಸ್ಥಾನವನ್ನು, ಬಾಲಕಿಯರ ವಿಭಾಗದಲ್ಲಿ ಸರಸ್ವತಿ ನರಿಮೊಗರು ಪ್ರಥಮ ಸ್ಥಾನವನ್ನು,ಕೆಪಿಎಸ್ ಕೆಯ್ಯೂರು ದ್ವಿತೀಯ ಸ್ಥಾನವನ್ನು, ಪ್ರೌಢಶಾಲೆಯ ಬಾಲಕರ ವಿಭಾಗದಲ್ಲಿ ಪ್ರಗತಿ ಕಾಣಿಯೂರು ಪ್ರಥಮ ಸ್ಥಾನವನ್ನು, ಎಸ್ ಜಿ ಎಂ ಭಕ್ತಕೋಡಿ ದ್ವಿತೀಯ ಸ್ಥಾನವನ್ನು, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಎಸ್ ಜಿ ಎಂ ಭಕ್ತಕೋಡಿ ಪ್ರಥಮ ಸ್ಥಾನವನ್ನು ಪಡೆಯಿತು. ವೀರಮಂಗಲ ದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಸರ್ವ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here