





ಬಡಗನ್ನೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡುಮಲೆ ಇದರ ವತಿಯಿಂದ ನಡೆಯುವ ಪ್ರಥಮ ವರ್ಷದ “ಕೆಸರ್ ಡ್ ಒಂಜಿ ದಿನ” ಕಾರ್ಯಕ್ರಮ ಆ.18 ರಂದು ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆ.4 ರಂದು ಶ್ರೀ ದೇವಾಲಯ ಆವರಣದಲ್ಲಿ ನಡೆಯಿತು.


ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.





ಪ್ರಾರಂಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಮುಂದೆ ಇಟ್ಟು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ರವರ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ, ಕಾರ್ಯದರ್ಶಿ ಸುರೇಶ್ ರೈ ಪಳ್ಳತ್ತಾರು, ಉಪಾಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ ಸಂಚಾಲಕರಾದ ರಘುರಾಮ ಪಟಾಳಿ ಶರವು, ಸುಬ್ಬಯ್ಯ ರೈ ಹಲಸಿನಡಿ ಹಾಗೂ ಸ್ಥಳೀಯರಾದ ಪುರಂದರ ರೈ ಸೇನೆರಮಜಲು, ನಾರಾಯಣ ಪಾಟಾಳಿ ಮೈಂದನಡ್ಕ, ಸುಧಾಕರ ರೈ ಈಶಮೂಲೆ, ಪ್ರಕಾಶ್ ಸಾಲಿಯನ್ ಕಟ್ಟಾವು, ಚುಕ್ಕೇಶ್ ಕುಲಾಲ್ ಪೈರುಪುಣಿ, ಹಾಗೂ ಸಮಿತಿ ಸದಸ್ಯರುಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.









