ಇನ್ನಷ್ಟು ಕುಸಿಯುವ ಸಾಧ್ಯತೆ; ಆತಂಕದಲ್ಲಿ ಮನೆಯವರು
ಪುತ್ತೂರು: ಸರ್ವೆ ಗ್ರಾಮದ ಎಲಿಯ ನಿವಾಸಿ, ನಿವೃತ್ತ ಪ್ರಾಂಶುಪಾಲ ಬಿ ವಿ ಸೂರ್ಯನಾರಾಯಣ ಅವರ ಮನೆಯ ಹಿಂಭಾಗದ ಗುಡ್ಡ ಕುಸಿದು ಬಿದ್ದಿದೆ. ಜು.29ರಂದು ಸುರಿದ ಭಾರೀ ಮಳೆಗೆ
ಮನೆಯ ಹಿಂಭಾಗದ ಗುಡ್ಡ ಕುಸಿದು ಮನೆಯ ಗೋಡೆಯವರೆಗೂ ಗುಡ್ಡದ ಮಣ್ಣು ರಾಶಿ ಬಿದ್ದಿದ್ದು ಅದೃಷ್ಟವಶಾತ್ ಮನೆಗೆ ಯಾವುದೇ ಹಾನಿ ಸಂಭವಿಸಿಲ್ಲ.
ಮನೆಯ ಹಿಂಭಾಗದಲ್ಲಿ ಬೃಹತ್ ಗುಡ್ಡವಿದ್ದು ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಹಂಚಿನ ಮನೆ ಆದ ಕಾರಣ ಮನೆಮಂದಿ ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಟರ್ಪಾಲನ್ನು ಹೊದಿಸಲಾಗಿದೆ
ನಮ್ಮನೆ ಸುಮಾರು 60 ವರ್ಷಗಳ ಹಿಂದೆ ಕಟ್ಟಿದ ಮನೆ ಇದಾಗಿದ್ದು ಇದುವರೆಗೂ ಗುಡ್ಡ ಕುಸಿತದಂತಹ ಯಾವುದೇ ಘಟನೆಗಳು ನಡೆದಿಲ್ಲ, ಇದೀಗ ಏಕಾಏಕಿ ಗುಡ್ಡ ಜರಿದು ಬಿದ್ದಿದ್ದು ಇನ್ನಷ್ಟು ಕುಸಿಯವ ಆತಂಕ ಉಂಟಾಗಿದೆ. ಗುಡ್ಡ ಸುಮಾರು 120 ಅಡಿ ಉದ್ದವಿದ್ದು ಈಗ ಸುಮಾರು 70 ಅಡಿ ಉದ್ದಕ್ಕೆ ಕುಸಿದಿದೆ ಎಂದು ಬಿ.ವಿ ಸೂರ್ಯನಾರಾಯಣ ಎಲಿಯ ತಿಳಿಸಿದ್ದಾರೆ.