ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಸಾಂಪ್ರದಾಯಿಕ ಗದ್ದೆ ಬೇಸಾಯಕ್ಕೆ ಚಾಲನೆ

0

ಬೇಸಾಯದಿಂದ ಬಂದ ಪೂರ್ತಿ ಅಕ್ಕಿ ದೇವರಿಗೆ ಅರ್ಪಣೆಯಾಗುವವರೆಗೆ ವ್ಯವಸ್ಥಿತವಾದ ಕಾರ್ಯ- ಅಶೋಕ್ ಕುಮಾರ್ ರೈ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಸಾಂಪ್ರದಾಯಿಕ ಗದ್ದೆ ಬೇಸಾಯ ಉಳುಮೆಗೆ ಆ.5 ರಂದು ಚಾಲನೆ ನೀಡಲಾಯಿತು.ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಸಲ್ಲಿಸಿದರು . ಶಾಸಕ ಅಶೋಕ್ ಕುಮಾರ್ ರೈ ತೆಂಗಿನ ಕಾಯಿ ಒಡೆದು, ಟ್ರ್ಯಾಕ್ಟರ್ ಮೂಲಕ ಗದ್ದೆ ಉಳುಮೆಗೆ ಚಾಲನೆ ನೀಡಿದರು.


ಬೇಸಾಯದಿಂದ ಬಂದ ಪೂರ್ತಿ ಅಕ್ಕಿ ದೇವರಿಗೆ ಅರ್ಪಣೆಯಾಗಲಿ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಪುಣ್ಯದ ಗದ್ದೆಯಲ್ಲಿ ಭಕ್ತಾಧಿಗಳ ಆಶಯದಂತೆ ಭತ್ತದ ಬೇಸಾಯ ಆರಂಭಿಸಿದ್ದೇವೆ. ಕೇವಲ ಆರಂಭ ಮಾಡುವುದು ಮಾತ್ರವಲ್ಲ ವ್ಯವಸ್ಥಿತವಾದ ಕಾರ್ಯಗಳನ್ನು ಮಾಡಿ ಮಾದರಿಯಾಗಬೇಕು. ಯಾಕೆಂದರೆ ಕಳೆದ ವರ್ಷವೂ ನಾನು ಬೇಸಾಯದ ಆರಂಭಕ್ಕೆ ಬಂದಿದ್ದೆ.‌ಆದರೆ ಒಂದೂವರೆ ತಿಂಗಳಾದ ಬಳಿಕ ಇದು ಭತ್ತ ಕೃಷಿಯ, ಕಳೆಯಾ ಎಂದು ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಈ ಬಾರಿ ಶ್ರೀ ಕ್ಷೇ ಧ ಗ್ರಾ ಯೋಜನೆಯವರನ್ನು ಮತ್ತು ಕೃಷಿ ಇಲಾಖೆಯವರನ್ಬು ಜೋಡಿಸಿಕೊಂಡಿದ್ದೇವೆ. ಭತ್ತ ಬಿತ್ತನೆ ಮಾಡುವುದು ಮಾತ್ರವಲ್ಲ, ಈ ಬೇಸಾಯದಿಂದ ಬಂದ ಪೂರ್ತಿ ಅಕ್ಕಿ ದೇವರಿಗೆ ಅರ್ಪಣೆಯಾಗುವ ತನಕ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕೆಂಬ ಕಲ್ಪಣೆ ಇದೆ. ಉತ್ತಮ ರೀತಿಯಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಮಾಡಿದ್ದೆನೆ. ಹಾಗಾಗಿ ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಶ್ರೀ ಕ್ಷೇ ಧ ಗ್ರಾ ಯೋ, ಕೃಷಿ ಇಲಾಖೆಯವರು ಮತ್ತು ಭಕ್ತಾದಿಗಳು ಸೇರಿಕೊಂಡು ವ್ಯವಸ್ಥಿತವಾಗಿ ಈ ಬಾರಿ ಭತ್ತ ಕೃಷಿ ಮಾಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ದೇವಳದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್ ಕೆ ಜಗನ್ನಿವಾಸ ರಾವದ, ಸುದೇಶ್ ಕುಮಾರ್, ದಿನೇಶ್ ಪಿ ವಿ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಉದ್ಯಮಿ ವಿನಯ, ಶ್ರೀ ಕ್ಷೇ ಧ ಗ್ರಾ. ಯೋಜನಾಧಿಕಾರಿ ಶಶಿಧರ್, ಕೃಷಿ ವೀಭಾಗದ ಯೋಜನಾಧಿಕಾರಿಗಳಾ್ ಮೋಹನ್ ಮತ್ತು ಉಮೇಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here