ಆ.10: ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ‘ಫಿಲೋ ಆಟಿದ ಕೂಟ’

0

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಮತ್ತು ಮಾನವಿಕ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 10ರಂದು ಕಾಲೇಜಿನ ರಜತ ಮಹೋತ್ಸವ ಸ್ಮಾರಕ ಭವನದಲ್ಲಿ ‘ಫಿಲೋ ಆಟಿದ ಕೂಟ’ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ, ಮುಖ್ಯ ಅತಿಥಿಗಳಾಗಿ ಯಕ್ಷ ಬೊಳ್ಳಿ ದಿನೇಶ್ ರೈ ಕಡಬ, ಕುಸಲ್ದ ಗುರಿಕಾರೆ ದಿನೇಶ್ ಶೆಟ್ಟಿಗಾರ್ ಕೋಡಪದವು, ಕುಸಲ್ದ ರಾಜೆ ಸುಂದರ ರೈ ಮಂದಾರ, ಕಾಲೇಜಿನ ರಕ್ಷಕ ಶಿಕ್ಷಕ ಸಂಘದ  ಉಪಾಧ್ಯಕ್ಷರಾದ ಪುತ್ತೂರಿನ  ಡಾ. ಶ್ರೀ ಪ್ರಕಾಶ್ ಬಿ  ವಹಿಸಲಿದ್ದು, ವಿಶೇಷ ಆಕರ್ಷಣೆಯಾಗಿ ಯಕ್ಷ ಬೊಳ್ಳಿ ದಿನೇಶ್ ರೈ ಕಡಬ, ಕುಸಲ್ದ ಗುರಿಕಾರೆ ದಿನೇಶ್ ಶೆಟ್ಟಿಗಾರ್ ಕೋಡಪದವು ಹಾಗೂ ಕುಸಲ್ದ ರಾಜೆ ಸುಂದರ ರೈ ಮಂದಾರ  ಇವರಿಂದ ಹಾಸ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here