ಹನುಮಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭತ್ತದ ಕೃಷಿ ವಿಶೇಷ ಅಭಿಯಾನ

0

ಈಶ್ವರಮಂಗಲ: ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿ ಈಶ್ವರಮಂಗಲ ಇಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಹಾಗೂ ವಿಜಯ ಗ್ರಾಮ ಸಮಿತಿ ಇವರ ನೇತೃತ್ವದಲ್ಲಿ ಭತ್ತದ ಕೃಷಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿ ಪ್ರಗತಿಪರ ಭತ್ತದ ಕೃಷಿಕ ಸಂಜೀವ ಪೂಜಾರಿ ಕಾನ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನದೊಂದಿಗೆ
ಕೃಷಿಯಲ್ಲಿಯೂ ಆಸಕ್ತಿ ಬೆಳೆಸಬೇಕು.ಸಾವಯವ ಗೊಬ್ಬರದ ಬಳಕೆ ಹಾಗೂ ಭತ್ತದ ತಳಿಗಳು,ಅದರ ನಿರ್ವಹಣೆ,ರೋಗನಾಶಕಗಳ ಬಳಕೆ, ಬೇಸಾಯ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಮಾಧವ ನಾಯಕ್ ಪ್ರಾಸ್ತಾಮಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಗೋಪಾಲಕೃಷ್ಣ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ದೊರಕುವ ಕೃಷಿಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ ನಮ್ಮ ಶಾಲಾ ಸಂಚಾಲಕ ಶಿವರಾಮ್ ಪಿ ಕೃಷಿ ಪ್ರಧಾನವಾದ ಭಾರತ ದೇಶದಲ್ಲಿರುವ ನಾವೆಲ್ಲರು ಕೃಷಿಯ ಬಗ್ಗೆ ಅರಿವು ಒಲವು ಮೂಡಿಸಿಕೊಳ್ಳಬೇಕು.ಕೃಷಿಕರಿಗೆ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿ ಅವರ ಪರಿಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದರು.

ವಿದ್ಯಾರ್ಥಿಯಾದ ಸಚಿನ್ ತನ್ನ ಮನೆಯ ಅಂಗಳದಲ್ಲಿ ಕಿರು ಗದ್ದೆ ಬೇಸಾಯ ಮಾಡಿ ಬೆಳೆಸಿದ್ದು, ಈ ಕಾರ್ಯಕ್ರಮದಲ್ಲಿ ವಿಜಯ ಗ್ರಾಮ ಸಮಿತಿ ಹಾಗೂ ಶಾಲೆಯ ವತಿಯಿಂದ ಕಿರು ಕಾಣಿಕೆಯನ್ನು ನೀಡುವುದರ ಮೂಲಕ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷರು ವಿಜಯ ಗ್ರಾಮೀಣ ಸಮಿತಿ ಸುಳ್ಯ ಪದವು ಗೋವಿಂದ ಭಟ್, ಪ್ರಾಂಶುಪಾಲರಾದ ಕೆ ಶಾಮಣ್ಣ ,ಶಾಲಾ ಮುಖ್ಯ ಶಿಕ್ಷಕಿ ಸೌಮ್ಯ ಎ ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ನೇಜಿಯನ್ನು ವಿತರಿಸಲಾಯಿತು. ಧನಲಕ್ಷ್ಮಿ ಮತ್ತು ಸೌಮ್ಯ ನಿರೂಪಿಸಿ,ಉತ್ತಮ್ ರವರು ವಂದಿಸಿದರು.

LEAVE A REPLY

Please enter your comment!
Please enter your name here