ಪುತ್ತೂರು: ಪುತ್ತೂರು ನಗರ ವಲಯ ಮಟ್ಟದ ಚೆಸ್ ಪಂದ್ಯಾಟ ಕೋಡಿಂಬಾಡಿ ಹಿ.ಪ್ರಾ.ಶಾಲೆಯಲ್ಲಿ ಆ.7ರಂದು ನಡೆಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಚೆಸ್ ಪಂದ್ಯಾಟದಿಂದ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.
ಪುತ್ತೂರು ನಗರ ವಲಯದ ಪ್ರೌಢಶಾಲೆಯ ನೋಡೆಲ್ ಅಧಿಕಾರಿ ನರೇಶ್ ಲೋಬೋ ಅವರು ಚದುರಂಗದ ಹಾಸಿನ ಕಾಯಿಯನ್ನು ಮುನ್ನಡೆಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಶೇಖರ ಪೂಜಾರಿ ನಿಡ್ಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಟ್ಯಾನಿ ಮಸ್ಕರೇನಸ್, ಪುತ್ತೂರು ನಗರ ವಲಯದ ಪ್ರಾಥಮಿಕ ಶಾಲೆಯ ನೋಡೆಲ್ ಅಧಿಕಾರಿ ಕುಸುಮಾವತಿ, ಕೋಡಿಂಬಾಡಿ ಕ್ಲಸ್ಟರ್ ಸಿ. ಆರ್. ಪಿ. ಅಶ್ರಫ್, ಎಸ್.ಡಿ. ಎಂ. ಸಿ. ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಮುಖ್ಯಗುರು ಬಾಲಕೃಷ್ಣ ಎನ್. ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ವಿಜಯ ಪ್ರಭು ಎಂ. ಭಾಗವಹಿಸಿದ್ದರು.
ಪುತ್ತೂರು ತಾಲೂಕಿನ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಆಗಮಿಸಿ ಶುಭ ಹಾರೈಸಿದರು.