ಕೋಡಿಂಬಾಡಿ ಗ್ರಾ.ಪಂ. ಕಚೇರಿಗೆ ಡಿಜಿಟಲ್ ಟಚ್!

0

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಕಚೇರಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ.
ಡಿಜಿಟಲ್ ವ್ಯವಸ್ಥೆಗೆ ಪೂರಕವಾಗಿ ಪಂಚಾಯತ್ ಕಚೇರಿಯಲ್ಲಿ ಹಣ ಪಾವತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮ ಪಂಚಾಯತಿಗೆ ಪಾವತಿಸಬೇಕಾದ ಕುಡಿಯುವ ನೀರಿನ ಶುಲ್ಕ ಸಹಿತ ಯಾವುದೇ ತೆರಿಗೆಗಳನ್ನು ಸ್ಕ್ಯಾನರ್ ಅಥವಾ ಗೂಗಲ್ ಪೇ ಮೂಲಕ ಪಾವತಿಸಬಹುದಾಗಿದೆ. ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಅಶೋಕ್ ಮತ್ತು ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅವರ ಚಿಂತನೆಯಂತೆ ಈ ವ್ಯವಸ್ಥೆ ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here