ಕೆಯ್ಯೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ ಜುಲೈ 7 ರಂದು ಸವಣೂರು ವಲಯ ಮಟ್ಟದ ಚೆಸ್ ಪಂದ್ಯಾಟ ನಡೆಯಿತು.
ಕೆಪಿಎಸ್ ಕೆಯ್ಯೂರಿನ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಎ.ಕೆ. ಜಯರಾಮ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ. ಚೆಸ್ ಆಟವು ಮೆದುಳನ್ನು ಚುರುಕುಗೊಳಿಸುವ ಆಟ. ಇಂತಹ ಪಂದ್ಯಾಟವನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಲು ಅವಕಾಶ ಸಿಕ್ಕಿರುವುದು ಸಂತಸದ ವಿಷಯ ಎಂದು ಹೇಳಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ, ಸದಸ್ಯರುಗಳಾದ ಮೀನಾಕ್ಷಿ ವಿ ರೈ ಹಾಗೂ ಜಯಂತ ಪೂಜಾರಿ ಕೆಂಗುಡೇಲು, ಸವಣೂರು ವಲಯ ನೋಡಲ್ ಶಿಕ್ಷಕರಾದ ಬಾಲಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ಇದರ ಕಾರ್ಯದರ್ಶಿ ನವೀನ್ ರೈ , ಕೆಪಿಎಸ್ ಕೆಯ್ಯೂರಿನ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಬಾಬು ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಪಿಎಸ್ ಕೆಯ್ಯೂರಿನ ಪ್ರಾಂಶುಪಾಲ ಇಸ್ಮಾಯಿಲ್ ಪಿಯವರು ಚೆಸ್ ಎಂಬುದು ಯೋಜನೆ ಹಾಗೂ ಯೋಚನೆ ಅಗತ್ಯವಿರುವ ಆಟ. ಈ ಆಟದಲ್ಲಿ ಭಾಗವಹಿಸಲು ಬುದ್ಧಿವಂತಿಕೆ ಬೇಕು. ಎಲ್ಲಾ ಸ್ಪರ್ಧಾಳುಗಳೂ ಉತ್ತಮವಾಗಿ ಆಡಿ, ಎಂದು ಶುಭ ಹಾರೈಸಿದರು.
ಕೆಪಿಎಸ್ ಕೆಯ್ಯೂರಿನ ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ಪಿ ಸ್ವಾಗತಿಸಿ, ಉಪಪ್ರಾಂಶುಪಾಲರ ವಿನೋದ್ ಕುಮಾರ್ ಕೆ ಎಸ್ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸವಣೂರು ನೋಡಲ್ ಶಿಕ್ಷಕ ಬಾಲಕೃಷ್ಣ ವಂದಿಸಿದರು. ಸವಣೂರು ವಲಯದ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಸ್ಪರ್ಧಾಳುಗಳು ಆಗಮಿಸಿದ್ದರು. ಸಾಯಂಕಾಲ ಕೆಯ್ಯೂರು ಸಿ ಆರ್ ಪಿ ಶಶಿಕಲಾ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚೆಸ್ ತೀರ್ಪುಗಾರ ಮಹೇಶ್ ಕೋಟೆ ಮತ್ತು ರಮೇಶ್ ಕೋಟೆ, ಕೆ.ಪಿ.ಎಸ್ ಕೆಯ್ಯೂರಿನ ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ಪಿ., ಸವಣೂರು ನೋಡಲ್ ಶಿಕ್ಷಕ ಬಾಲಕೃಷ್ಣ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ. ಎಸ್, ಪ್ರಾಥಮಿಕ ಶಾಲಾ ಮುಖ್ಯಗುರು ಬಾಬು ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಪರ್ಧೆಯ ಫಲಿತಾಂಶ ಹೀಗಿದೆ.
17 ರ ವಯೋಮಾನದ ಬಾಲಕರ ವಿಭಾಗ
1. ಜನಕ್ R.K- ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು
2. ಓಂಕಾರ್ ಶಿವಪ್ರಸಾದ್ – ಸಾಂದೀಪನಿ ವಿದ್ಯಾಸಂಸ್ಥೆ. ನರಿಮೊಗರು.
3. ಜೀವಿತ್ P H – ಸರಸ್ವತಿ ವಿದ್ಯಾಲಯ. ನರಿಮೊಗರು
4. ಪವನ್ ಗೌಡ – ವಿದ್ಯಾರಶ್ಮಿ ವಿದ್ಯಾಲಯ ಸವಣೂರು
5. ಹಸನ್ ನಿಶಾಮುಲ್ ಹನೀಫ್- ಈಡನ್ ಗ್ಲೋಬಲ್ ಸ್ಕೂಲ್. ಬೆಳಂದೂರು
17 ರ ವಯೋಮಾನದ ಬಾಲಕಿಯರ ವಿಭಾಗ
1. ನಿಶ್ಮಿತಾ – ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು
2. ಧನಲಕ್ಷ್ಮಿ – ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು
3. ಖತೀಜತ್ ಸ್ವಫ್ವಾ- ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು
4. ಜಯಶ್ರೀ – ಕೆ.ಪಿ.ಎಸ್ ಕೆಯ್ಯೂರು
5. ಭಾಗ್ಯಶ್ರೀ – ಸಾಂದೀಪನಿ ವಿದ್ಯಾಸಂಸ್ಥೆ. ನರಿಮೊಗರು
14 ರ ವಯೋಮಾನದ ಪ್ರೌಢಶಾಲಾ ಬಾಲಕರ ವಿಭಾಗ
1. ಶಮಂತ್ ಎನ್ – ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು
14 ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗ
1. ಸಾನ್ವಿಕಾ – ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು
14 ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕರ ವಿಭಾಗ
1. ಆಶೀರ್ ಅಬ್ದುಲ್ – ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು.
2.ಮಹಮ್ಮದ್ ಸಿನಾನ್ – ಪಿ.ಎಂ. ಶ್ರೀ ಸ.ಹಿ.ಪ್ರಾ ಶಾಲೆ ವೀರಮಂಗಲ
3. ಶ್ರೀರಥ್ ಪಿ. ರೈ – ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು
4. ಮಹಮ್ಮದ್ ನುಮೂನ್ – ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು
14 ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ
1. ಆರೋಹಿ ಯಶವಂತ್ – ಸಾಂದೀಪನಿ. ಗ್ರಾಮೀಣ ವಿದ್ಯಾಸಂಸ್ಥೆ. ನರಿಮೊಗರು
2. ವೈಷ್ಣವಿ ಎಸ್- ಸ.ಉ.ಹಿ.ಪ್ರಾ. ಶಾಲೆ ಕುದ್ಮಾರು
3. ಯಶಿಕಾ ಪಿ.ಎಸ್ – ಸ.ಹಿ.ಪ್ರಾ. ಶಾಲೆ ಭಕ್ತಕೋಡಿ
4. ಹಲಿಮತ್ ಹಿಬಾ – ಸ.ಉ.ಹಿ.ಪ್ರಾ. ಶಾಲೆ ಮುಂಡೂರು.
ಈ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ.