ಪುತ್ತೂರು: ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಆ.9ರಂದು ನಾಗರಪಂಚಮಿ ಆಚರಣೆ ನಡೆಯಲಿದೆ. ಭಕ್ತಾಭಿಮಾನಿಗಳು ಹಾಲು, ಸೀಯಾಳವನ್ನು ಬೆಳಿಗ್ಗೆ 8 ಗಂಟೆಗೆ ತರಬೇಕು. ನಾಗದೇವರಿಗೆ ತನು ಅರ್ಪಣೆ ಮಾಡುವ ಹಾಲನ್ನು ಪ್ಲಾಸ್ಟಿಕ್ ಬಾಟಲಿ, ಪೆಪ್ಸಿ, ಸೋಡಾ ಬಾಟಲಿಗಳಲ್ಲಿ ತಂದು ಶುದ್ಧಾಚರಣೆಯಲ್ಲಿ ಮೈಲಿಗೆ ಮಾಡದೆ ಸ್ಟೀಲ್ ಪಾತ್ರೆ ಅಥವಾ ಕಂಚಿನ ಪಾತ್ರೆಗಳಲ್ಲಿ ತಂದು ಸಹಕರಿಸಬೇಕು ಎಂದು ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಹಾಗೂ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ತಿಳಿಸಿದ್ದಾರೆ.