ಕಡಬ: ಸೈoಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರ ದಿನಾಚರಣೆ ಹಾಗೂ ಗ್ರ್ಯಾಂಡ್ ಪೇರೆಂಟ್ಸ್ ಡೇ (ಅಜ್ಜ -ಅಜ್ಜಿಯಂದಿರ ದಿನ) ಸೈoಟ್ ಜೋಕಿಮ್ ಸಭಾಭವನದಲ್ಲಿ ಜರಗಿತು.
ಸಂಸ್ಥೆಯ ಪಾಲಕರಾದ ಸಂತ ಅನ್ನರ ಮತ್ತು ಜೋಕಿಮರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ವಂದನೀಯ ಗ್ರೇಷಿಯನ್ ಅಲ್ವಾರಿಸ್ ಧರ್ಮಗುರು ಬಾಲಯೇಸು ಚರ್ಚ್ ನೆಲ್ಯಾಡಿ, ಅಜ್ಜ -ಅಜ್ಜಿಯರ ದಿನವು ಸುಂದರವಾದ ಬಂಧವನ್ನು ಸಂಭ್ರಮಿಸಲು ಇರುವ ದಿನವಾಗಿದೆ. ಇದು ಸಂಬಂಧಗಳ ಮಹತ್ವವನ್ನು ಸಾರುತ್ತದೆ. ಜೊತೆಗೆ ಈ ದಿನವು ಅಜ್ಜ -ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಬಾಂಧವ್ಯವನ್ನು ಗೌರವಿಸುತ್ತದೆ. ಸಂಸ್ಥೆಯ ಪಾಲಕರ ಆಶೀರ್ವಾದವು ಕೂಡ ನಮ್ಮೆಲ್ಲರ ಮೇಲೆ ಇರಲಿ ಎಂದು ಹರಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಸಂಚಾಲಕ ವಂದನೀಯ ಪ್ರಕಾಶ್ ಪೌಲ್ ಡಿಸೋಜ ಅವರು ಮಕ್ಕಳು ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಸೈoಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಡೆನ್ನಿಸ್ ಫೆರ್ನಾಂಡಿಸ್, ಸೈoಟ್ ಆನ್ಸ್ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಗಿರಿಧರ್ ರೈ, ಸೈoಟ್ ಆನ್ಸ್ ಶಾಲೆಯ ಪ್ರಾಂಶುಪಾಲ ವಂದನೀಯ ಅಮಿತ್ ಪ್ರಕಾಶ್ ರೋಡ್ರಿಗಸ್, ಪ್ರಾರ್ಥಮಿಕ ವಿಭಾಗ ದ ಮುಖ್ಯ ಶಿಕ್ಷಕಿ ದಕ್ಷ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಸುರಕ್ಷಾ ವಂದಿಸಿದರು. ಅನುಷಾ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಬಳಿಕ ಪೂರ್ವ ಪ್ರಾರ್ಥಮಿಕ ಮಕ್ಕಳ ಅಜ್ಜ – ಅಜ್ಜಿ ಯರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.