ಕೆಯ್ಯೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ಇದರ ವತಿಯಿಂದ ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಕಾರ್ಯಕ್ಷೇತ್ರ ದೇರ್ಲ ಒಕ್ಕೂಟದ ಆಟಿಕೂಟ ಕಾರ್ಯಕ್ರಮವು ಜಯ ಕರ್ನಾಟಕ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ. ಕ್ಷೇ.ಧ. ಗ್ರಾ. ಯೋಜನೆ ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ದೀಪ ಪ್ರಜ್ವಲಿಸುವ ಮೂಲಕ ಉಧ್ಘಾಟಿಸಿ ಆಟೋಟ ಸ್ಪರ್ಧೆಗೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ, ಮಾತಾಡಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಅನೇಕ ಕಡು ಬಡವರು, ಒಂದೇ ರೀತಿಯಲ್ಲಿ ಬದುಕುವ ವ್ಯವಸ್ಥೆಯಾಗಿದೆ ಕೃಷಿ ಭೂಮಿ ಅಭಿವೃದ್ಧಿಯಾಗುತಿದೆ, ಶ್ರಮವಿನಿಮಯದ ಮುಖಾಂತರ ಎಂದರು.
ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಬೇಬಿ ಪೂಜಾರಿ, ಉಪಾಧ್ಯಕ್ಷ ಜಲಧರ ರೈ, ಕಾರ್ಯದರ್ಶಿ ಹರಿಣಾಕ್ಷಿ, ಜತೆ ಕಾರ್ಯದರ್ಶಿ ವನಜಾಕ್ಷಿ ಕೋಶಾಧಿಕಾರಿ ವಿಮಲ ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಆಟೋಟ ಸ್ವರ್ದೇ ನಡೆದು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ದೇರ್ಲ ಒಕ್ಕೂಟದ ಸದಸ್ಯರು ತಯಾರಿಸಿದ ಆಟಿ ತಿಂಗಳ ವಿಶಿಷ್ಟ ತಿಂಡಿ ತಿನಸುಗಳನ್ನು ಒಳಗೊಂಡ ಸುವ್ಯವ್ಯಸ್ಥಿತ ಬೋಜನ ವ್ಯವಸ್ಥೆ ನಡೆಯಿತು. ಒಕ್ಕೂಟದ ಸಾಧನಾ ವರದಿಯನ್ನು ದೇರ್ಲ ಒಕ್ಕೂಟದ ಸೇವಾ ಪ್ರತಿನಿಧಿ ಲತಾ ಮಂಡಿಸಿದರು.ನಳಿನಿ ಪ್ರಾಥೀಸಿ, ಹರ್ಷಿತ ಸ್ವಾಗತಿಸಿ, ಬಾಬುಪಾಟಾಳಿ ದೇರ್ಲ ವಂದಿಸಿ, ಕಾರ್ಯಕ್ರಮ ನಿರೂಪಣೆಯನ್ನು ಕೆದಂಬಾಡಿ ವಲಯ ಮೇಲ್ವಿಚಾರಕಿ ಶುಭವತೀ ಪಿ.ಸಿ ನಿರ್ವಹಿಸಿದರು.