ದ.ಕ ಜಿಲ್ಲಾ ಸಮನ್ವಯ ವೇದಿಕೆ ನಿಯೋಗವು ಶಾಂತಿನಗರ ಶಾಲೆಗೆ ಭೇಟಿ

0

ಶಾಂತಿನಗರ: ಶಾಲಾಭಿವೃಧ್ದಿ ಮತ್ತು ಮೇಲುಸ್ತುವಾರಿ ಸಮನ್ವಯ ವೇದಿಕೆಯ ಜಿಲ್ಲಾ ನಿಯೋಗವು ಪುತ್ತೂರು ತಾಲೂಕಿನ ಶಾಂತಿನಗರ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರಿಂದ ಮಾಹಿತಿ ಪಡೆದು ಕೊಂಡರು.


ಜಿಲ್ಲಾಧ್ಯಕ್ಷ ಎಸ್.ಎಮ್ ಇಸ್ಮಾಯಿಲ್ ನೆಲ್ಯಾಡಿ ಎಸ್.ಡಿ.ಎಂ.ಸಿ ಸದಸ್ಯರಿಗೆ ತಮ್ಮ ಕಾರ್ಯಚಟುವಟಿಕೆಗಳ ಮತ್ತು ಶಾಲೆಯ ಸಮಗ್ರ ಅಭಿವೃದ್ಧಿಗೆ ಪೋಷಕರ ಜೊತೆ ಸೇರಿ ಶಾಲೆಯ ಅಭಿವೃದ್ಧಿಯನ್ನು ನಿರ್ವಹಿಸಿ ಎಂದು ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ಇವರು ಜಿಲ್ಲಾ ಸಮನ್ವಯ ವೇದಿಕೆಯ ಮತ್ತು ರಾಜ್ಯ ಸಮನ್ವಯ ವೇದಿಕೆಯ ಕಾರ್ಯ ಚಟುವಟಿಕೆ ಮತ್ತು ಜವಾಬ್ದಾರಿಯ ಬಗ್ಗೆ ಎಸ್‌.ಡಿ.ಎಂ.ಸಿ ಸದಸ್ಯರಿಗೆ ವಿವರಿಸಿದರು.
ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಅಝೀಝ್ ಬಿ.ಕೆ ಕೆಮ್ಮಾರ ಮಾತನಾಡಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕಲಿಕಾ ಪರಿಸರ, ಶಾಲಾಭಿವೃಧ್ದಿ ಮತ್ತು ಅಧ್ಯಾಪಕರ ನಡುವಿನ ಹೊಂದಾಣಿಕೆ, ಮುಖ್ಯಗುರುಗಳ ಸಹಕಾರ, ಪೋಷಕರ ಪ್ರೋತ್ಸಾಹದ ಜೊತೆಗೆ ವಿವಿಧ ಇಲಾಖೆಯ ಅನುದಾನಗಳನ್ನು ಪಡೆಯುವ ಬಗ್ಗೆ ವಿವರಿಸಿದರು. ಸ್ಥಳೀಯ ಸರಕಾರವಾದ ಗ್ರಾಮ ಪಂಚಾಯತ್ ಮೂಲಕ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ಶಾಸಕರಿಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ಮನವಿಯನ್ನು ಸಲ್ಲಿಸುವ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಂತಿನಗರ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುನೀರ್, ಉಪಾಧ್ಯಕ್ಷರಾದ ಸಲಾಂ, ಮುಖ್ಯ ಗುರುಗಳಾದ ಜೇಸಿಂತ ಆನ್ಸಿ, ಜಿಲ್ಲಾ ಕಾರ್ಯದರ್ಶಿಯಾಗಿರುವ ಕೃಷ್ಣ ನಾಯ್ಕ, ಸಂಘಟನಾ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಕೆಮ್ಮಾರ, ಸಂಘಟನಾ ಕಾರ್ಯದರ್ಶಿ ಸಮೀರ್ ಮುಕ್ವೆ, ಜಿಲ್ಲಾ ಸಮಿತಿ ಸದಸ್ಯೆ ಶ್ರೀಮತಿ ಶರಣ್ಯ ಶಾಂತಿನಗರ, ಶಾಂತಿನಗರ ಶಾಲೆಯ ಶಾಲಾಭಿವೃದ್ದಿ ಸಮಿತಿ ಸದಸ್ಯರು ಮತ್ತು ಪೋಷಕರು,ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here