ಅಧ್ಯಕ್ಷ:ರಾಮಕೃಷ್ಣ,ಕಾರ್ಯದರ್ಶಿ:ಅನೀಶ್ ಶೆಟ್ಟಿ,ಕೋಶಾಧಿಕಾರಿ ಶ್ರೀಹರ್ಷ ರೈ
ಪುತ್ತೂರು: ಪುತ್ತೂರು ತಾಲೂಕು ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ ಮಾಲಕರ ಸಂಘದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಜರಗಿದ್ದು ಅಧ್ಯಕ್ಷರಾಗಿ ಕೆಮ್ಮಾಯಿ ಆಶೀರ್ವಾದ್ ಶಾಮಿಯಾನದ ರಾಮಕೃಷ್ಣ, ಕಾರ್ಯದರ್ಶಿಯಾಗಿ ತಿಂಗಳಾಡಿ ಸುಬ್ರಹ್ಮಣ್ಯ ಶಾಮಿಯಾನದ ಅನೀಶ್ ಶೆಟ್ಟಿ, ಕೋಶಾಧಿಕಾರಿಯಾಗಿ ಬುಳೇರಿಕಟ್ಟೆ ಸ್ಕಂದ ಪವರ್ ಜನರೇಟರ್ ಸರ್ವಿಸಸ್ನ ಶ್ರೀಹರ್ಷ ರೈ ಆಯ್ಕೆಯಾಗಿದ್ದಾರೆ.
ಉಳಿದಂತೆ ಗೌರವಾಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಮಂಜಲ್ಪಡ್ಪು ವಿಜಯಾ ಸರ್ವಿಸಸ್ನ ಶ್ಯಾಮ್ ಮಂಜುನಾಥ್ ಪ್ರಸಾದ್, ಉಪಾಧ್ಯಕ್ಷರಾಗಿ ಬಲ್ನಾಡು ಎಸ್.ಎನ್ ಇವೆಂಟ್ಸ್ನ ನಾಗೇಶ್ ಬಲ್ನಾಡು, ಸಹ ಕಾರ್ಯದರ್ಶಿಯಾಗಿ ಪರ್ಪುಂಜ ಶುಭಂ ಶಾಮಿಯಾನದ ಗಣೇಶ್, ಸಂಘಟನಾ ಕಾರ್ಯದರ್ಶಿಯಾಗಿ ಕಾವು ಚಿಂತನಾ ಸೌಂಡ್ಸ್ ಆಂಡ್ ಲೈಟಿಂಗ್ಸ್ನ ಯೋಗೀಶ್ ಕಾವು, ಗೌರವ ಸಲಹೆಗಾರರಾಗಿ ಪಡೀಲು ಎಂಡಿಎಸ್ ಬ್ರದರ್ಸ್ನ ಹೆನ್ರಿ ಡಿ’ಸೋಜ, ಉರ್ಲಾಂಡಿ ಎಸ್ಎಂಎಸ್ಎಲ್ ಲೈಟಿಂಗ್ಸ್ ಆಂಡ್ ಸೌಂಡ್ಸ್ನ ಮನೋಹರ್ ಶೆಟ್ಟಿ, ಎಪಿಎಂಸಿ ರಸ್ತೆ ಸುಪ್ರೀಮ್ ಸರ್ವಿಸಸ್ನ ಸಿಪ್ರಿಯನ್ ಮೊರಾಸ್ರವರು ಆಯ್ಕೆಯಾಗಿದ್ದಾರೆ ಎಂದು ತಾಲೂಕು ಧ್ವನಿ ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ.
ಆ.12:ಪದ ಪ್ರದಾನ..
ಆ.12ರಂದು ಬಪ್ಪಳಿಗೆ-ಪುತ್ತೂರು ಜೈನ ಭವನದಲ್ಲಿ ಬೆಳಿಗ್ಗೆ ಪದ ಪ್ರದಾನ ಸಮಾರಂಭ ಜರಗಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮಂಗಳೂರು ಇದರ ಅಧ್ಯಕ್ಷ ಬಾಬು ಕೆ.ವಿಟ್ಲ ವಹಿಸಿಕೊಳ್ಳಲಿದ್ದಾರೆ. ನೂತನ ಪದಾಧಿಕಾರಿಗಳಿಗೆ ದ.ಕ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ರಾಜಶೇಖರ್ ಶೆಟ್ಟಿರವರು ಪ್ರಮಾಣವಚನವನ್ನು ಬೋಧಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಶ್ರೀಗಿರೀಶ್ ಮಳಿ, ಮಂಗಳೂರು ಸ್ವಿಚ್-ಇನ್-ಟಚ್ ಮಾಲಕ ಸುಫೈಲ್, ಗೌರವ ಉಪಸ್ಥಿತಿಯಾಗಿ ಕಡಬ ಶಾಮಿಯಾನ ಮತ್ತು ಧ್ವನಿ ಬೆಳಕು ಸಂಘದ ಅಧ್ಯಕ್ಷ ಪ್ರಮೋದ್ ರೈ, ಸುಳ್ಯ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಅಧ್ಯಕ್ಷ ಸತ್ಯಪ್ರಕಾಶ್, ಬಂಟ್ವಾಳ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಅಧ್ಯಕ್ಷ ಧನರಾಜ್ ಶೆಟ್ಟಿ ಫರಂಗಿಪೇಟೆ, ಮಂಗಳೂರು ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಅಧ್ಯಕ್ಷ ಬೆನೆಟ್ ಡಿಸಿಲ್ವ, ಬಂಟ್ವಾಳ ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಪಿಯೂಸ್ ಮ್ಯಾಕ್ಸಿಂ ಸಿಕ್ವೇರಾ, ಮೂಡಬಿದ್ರೆ ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಬೆಳ್ತಂಗಡಿ ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಹರೀಶ್ರವರು ಭಾಗವಹಿಸಲಿದ್ದಾರೆ.