ಕಾಣಿಯೂರು ಹಾ.ಉ.ಸ.ಸಂಘಕ್ಕೆ ಕೆಎಂಎಫ್ ಅಧಿಕಾರಿಗಳ ಭೇಟಿ, ರೈತರೊಂದಿಗೆ ಮಾತುಕತೆ

0

ಕಾಣಿಯೂರು: ಹೊಸದಾಗಿ ಹೈನುಗಾರಿಕೆ ಮಾಡಲು ಆಸಕ್ತಿ ಇರುವವರಿಗೆ ಮತ್ತು ಹಾಲು ಉತ್ಪಾದಕರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ ಕಾಣಿಯೂರು ಹಾಲು ಉತ್ಪಾದಕರ ಸಂಘದಲ್ಲಿ ನಡೆಯಿತು.


ಕೆಎಂಎಫ್ ನಿಂದ ಸಿಗುವ ಸವಲತ್ತುಗಳು, ಹಾಲು ಉತ್ಪಾದನೆಯನ್ನು ಲಾಭದಾಯಕವಾಗಿ ಮಾಡುವ ಅವಕಾಶಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಕೆಎಂಎಫ್ ಉಪವ್ಯವಸ್ಥಾಪಕರಾದ ಡಾ.ಸತೀಶ್ ರಾವ್ ಮಾಹಿತಿ ನೀಡಿದರು.ಕೆಎಂಎಫ್ ನ ವಿಸ್ತರಣಾಧಿಕಾರಿ ಡಾ.ನಿರಂಜನ್ ಹಸಿರು ಹುಲ್ಲು ಮೇವನ್ನು ಬೆಳೆಸುವ ಬಗ್ಗೆ, ಕಡಿಮೆ ಖರ್ಚಿನಲ್ಲಿ ರಸ ಮೇವಿನ ಉತ್ಪಾದನೆ ಮತ್ತು ಬಳಕೆ ಬಗ್ಗೆ ಮಾಹಿತಿ ನೀಡಿದರು.

ವಿಸ್ತರಣಾಧಿಕಾರಿಗಳಾದ ಶ್ರೀದೇವಿ, ಮಾಲತಿ, ವೇದಾವತಿ, ಆದಿತ್ಯ ,ಹರೀಶ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಣಿಯೂರು ಹಾ.ಉ..ಸ.ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ ಸ್ವಾಗತಿಸಿ, ಕಾರ್ಯದರ್ಶಿ ಜಗದೀಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ಅಬೀರ, ನಿರ್ದೇಶಕರಾದ ಭರತ್ ಅಗಳಿ, ಸದಾನಂದ ನಾವೂರು,ಪಶುಸಖಿ ಸುಮಿತ್ರಾ, ಸುಧಾ ಹಾಗೂ ಹಾಲು ಉತ್ಪಾದಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here