ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ

0

ಪುತ್ತೂರು:ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ ಇದರ ಆಶ್ರಯದಲ್ಲಿ ,ಗೋಸೇವಾ ಗತಿ ವಿಧಿ,ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ ಇದರ ಸಹಯೋಗದಲ್ಲಿ”Answer for cancer ” ಖ್ಯಾತಿಯ ಬೆಂಗಳೂರು ಆಯುರ್ವೇದ ತಜ್ಞ ವೈದ್ಯರು ಹಾಗೂ ಪಂಚಗವ್ಯ ಚಿಕಿತ್ಸಾ ತಜ್ಞ ಡಾ .ಡಿ .ಪಿ .ರಮೇಶ್ ಇವರಿಂದ ಪಂಚಗವ್ಯ ಚಿಕಿತ್ಸಾ ಶಿಬಿರ ಹಾಗೂ ಪಂಚಗವ್ಯ ಚಿಕಿತ್ಸೆ ವಿಚಾರ ಗೋಷ್ಠಿ ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಆ.11ರಂದು ನಡೆಯಿತು.

ಉದ್ಘಾಟನೆಯನ್ನು ಮಂಗಳೂರು ವಿಭಾಗ ಗೋಸೇವಾ ಗತಿವಿಧಿ ಸಂಯೋಜಕ ಗಂಗಾಧರ ಪೆರ್ಮಂಕಿ ನೆರವೇರಿಸಿದರು . ಅರೋಗ್ಯ ಭಾರತಿ ಪುತ್ತೂರು ಜಿಲ್ಲೆ ಇದರ ಅಧ್ಯಕ್ಷ ಡಾ . ಗಣೇಶ್ ಪ್ರಸಾದ್ ಮುದ್ರಜೆ ಅಧ್ಯಕ್ಷತೆ ವಹಿಸಿದ್ದರು .

ಗೋಷ್ಠಿಯಲ್ಲಿ ಡಾ . ಡಿ .ಪಿ .ರಮೇಶ್ ಇವರು “ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವ “ದ ಬಗ್ಗೆ, ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ “ಪಂಚಗವ್ಯ ಚಿಕಿತ್ಸೆ – ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೇಕ ಕ್ಯಾನ್ಸರ್ ರೋಗಿಗಳು ಸಂದರ್ಶಿಸಿ ಚಿಕಿತ್ಸೆ ಪಡೆದುಕೊಂಡರು . ಆಯುರ್ವೇದ ತಜ್ಞ ವೈದ್ಯ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮತ್ತು ಡಾ .ಡಿ .ಪಿ .ರಮೇಶ್ ಸ್ತನ ಕ್ಯಾನ್ಸರ್ , ವೃಷಣ ಕ್ಯಾನ್ಸರ್ , ಅಂಡಾಶಯದ ಕ್ಯಾನ್ಸರ್ ಇತ್ಯಾದಿ ಕ್ಯಾನ್ಸರ್ ರೋಗಿಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದರು . ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಎಂ.ಎಸ್ . ಭಟ್ ಸ್ವಾಗತಿಸಿದರು . ಡಾ . ಶ್ರುತಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು .

ಕ್ಯಾನ್ಸರ್ ಗೆ ಈ ಪಂಚಗವ್ಯ ಚಿಕಿತ್ಸಾ ಘಟಕ ಇನ್ನು ಪ್ರಸಾದಿನೀ ಆಸ್ಪತ್ರೆಯಲ್ಲಿ ನಿರಂತರ ಚಾಲನೆಯಲ್ಲಿರುವುದು .ಮಾಹಿತಿಗೆ 9740545979 ದೂರವಾಣಿಗೆ ಸಂಪರ್ಕಿಸಲು ಆಸ್ಪತ್ರೆಯ ಆಡಳಿತ ನಿರ್ದೇಶಕ , ವೈದ್ಯ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ವಿನಂತಿಸಿಕೊಂಡಿದ್ದಾರೆ .

LEAVE A REPLY

Please enter your comment!
Please enter your name here