ಪುತ್ತೂರು ಲಾಡ್ಜ್‌ನಲ್ಲಿ ಭಿನ್ನಧರ್ಮದ ಜೋಡಿ ವದಂತಿ -ಪೊಲೀಸರಿಂದ ಪರಿಶೀಲನೆ

0

ಪುತ್ತೂರು: ಭಿನ್ನಧರ್ಮದ ಜೋಡಿಯೊಂದು ಪುತ್ತೂರು ನೆಹರುನಗರದ ಲಾಡ್ಜ್‌ ಒಂದರಲ್ಲಿ ಇರುವ ಬಗ್ಗೆ ಬಂದ ಮಾಹಿತಿ ಆದರಿಸಿ ಪೊಲೀಸರು ಪರಿಶೀಲನೆ ನಡೆಸಿದ್ದು, ಭಿನ್ನಧರ್ಮದ ದಂಪತಿಗಳು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಭಿನ್ನಧರ್ಮದ ಜೋಡಿ ನೆಹರುನಗರದ ಕೀರ್ತನಾ ವಸತಿ ಗೃಹದಲ್ಲಿ ಉಳಿದುಕೊಂಡಿರುವ ಬಗ್ಗೆ ಪೊಲೀಸರಿಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ ಕೊಠಡಿ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದ ಜೋಡಿಯನ್ನು ವಿಚಾರಣೆ ನಡೆಸಿದಾಗ ಅವರು ಭಿನ್ನಧರ್ಮಕ್ಕೆ ಸೇರಿದ ಬೆಂಗಳೂರು ಮೂಲದ ದಂಪತಿಗಳೆಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಲಾಡ್ಜ್ ನ ಮ್ಹಾಲಕರು ಪ್ರತಿಕ್ರಿಯೆ ನೀಡಿದ್ದು, ‘ನಾವು 4 ವರ್ಷಗಳ ಹಿಂದೆಯೇ ಅಗ್ರಿಮೆಂಟ್ ಮೂಲಕ ಲಾಡ್ಜ್ ನಡೆಸಲು ಬೇರೊಂದು ಸಂಸ್ಥೆಗೆ ಕೊಟ್ಟಿರುತ್ತೇವೆ. ಘಟನೆಯ ಬಗ್ಗೆ ನಮಗೆ ಹೆಚ್ಚೇನು‌ ತಿಳಿದಿಲ್ಲ’ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here