ಪುತ್ತೂರು: ಕೆದಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಸಾರೆಪುಣಿ ಶಾಖೆಯ ವಿಜಿಲೆಂಟ್ ವಿಖಾಯ ತಂಡದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಆ.11ರಂದು ನಡೆಯಿತು.
ಶ್ರಮದಾನಕ್ಕೆ ಚಾಲನೆ ನೀಡಿದ ಶಾಲಾ ಎಸ್.ಡಿ.ಎಂ ಸಿ ಅಧ್ಯಕ್ಷ ಬಶೀರ್ ಬೂಡಿಯಾರ್ ಮಾತನಾಡಿ ವಿಜಿಲೆಂಟ್ ವಿಖಾಯ ಎಂಬುವುದು ಯಾವುದೇ ತುರ್ತು ಸಂದರ್ಭದಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನುರಿತ ಕೆಲಸಗಾರರು ಮಾಡುವ ಕೆಲಸಕ್ಕಿಂತ ಮಿಗಿಲಾದ ಕೆಲಸ ಮಾಡುವ ಒಂದು ಸನ್ನದ ಸೇನೆ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಮುಖ್ಯ ಗುರು ನಾಗವೇಣಿ ಸ್ವಾಗತಿಸಿ ,ಮಾತನಾಡಿ ಕಳೆದ ವರ್ಷವೂ ಶಾಲಾ ನೀರಿನ ಟ್ಯಾಂಕ್, ಶಾಲಾ ಪರಿಸರವನ್ನು ಶ್ರಮದಾನ ಮೂಲಕ ವಿಖಾಯದವರು ಮಾಡಿದ್ದರು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಎಸ್.ಕೆ.ಎಸ್.ಎಸ್.ಎಫ್ ಸಾರೆಪುಣಿ ಶಾಖೆಯ ಅಧ್ಯಕ್ಷ ಅನ್ಸಾರ್ ಇರ್ಫಾನಿ ಮಾತನಾಡಿದರು. ಶ್ರಮದಾನಕ್ಕೆ ಉಪಹಾರ ವ್ಯವಸ್ಥೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರು ಮಾಡಿದ್ದರು. ಸದಸ್ಯೆ ನೀತಿತಾ ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ಕೆದಂಬಾಡಿ ಗ್ರಾಪಂ ಸದಸ್ಯ ಕೃಷ್ಣ ಕುಮಾರ್, ಶಾಲಾ ಶಿಕ್ಷೆಕಿ ರೇಣುಕಾ, ಅಡುಗೆ ಸಿಬಂದಿಯವರು ಉಪಸ್ಥಿತರಿದ್ದರು. ಪ್ರ ಕಾರ್ಯದರ್ಶಿ ಇಕ್ಬಾಲ್ ಎಚ್ ಎ, ವಿಖಾಯ ಕಾರ್ಯದರ್ಶಿ ಝಕರಿಯ ಎಸ್ ಉಸ್ಮಾನ್, ಇಬ್ರಾಹಿಂ ಎಸ್, ತಾಜುದ್ದೀನ್ ಆಸೀಫ್, ಅಶ್ರಫ್ ಎ ಎಸ್, ಇಕ್ಬಾಲ್ ಜಿ, ಮುಝಮ್ಮಿಲ್, ನವಾಜ್, ಸರ್ಪುದೀನ್, ರಫೀಕ್, ಹುಸೈನ್,ಮುಬಶೀರ್ , ಮಿನಾಜ್, ಮುಸ್ತಾಫಾ, ರಾಝಿಕ್, ರಿಶಾನ್ ಶ್ರಮದಾನದಲ್ಲಿ ಭಾಗವಹಿಸಿದರು. ಎಸ್.ಕೆ.ಎಸ್.ಎಸ್.ಎಫ್ ಮುಖಂಡ ಅಶ್ರಫ್ ಸಾರೆಪುಣಿ ಮಾತನಾಡಿ ನಾವು ಮಾಡುವ ಕೆಲಸ ಕಾರ್ಯಗಳು ಕೇವಲ ಮದರಸ ಮಸೀದಿಗೆ ಸೀಮಿತವಾಗದೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದೇವೆ. ಸ್ಥಳೀಯವಾಗಿ ಶಾಲೆಗಳು,ಅಂಗನವಾಡಿ, ಬಸ್ಸು ತಂಗುದಾನ ಸ್ವಚ್ಛತೆ, ರಸ್ತೆಗೆ ಬಿದ್ದ ಮರ ತೆರವು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ವಿಖಾಯ ಎಂದರೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸರ್ವ ಸನ್ನದ್ಧ ಪಡೆಯಾಗಿದೆ ಎಂದು ತಿಳಿಸಿದರು.