ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವು ಆಗಸ್ಟ್ 13ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತಾನಾಡಿ ರೋಟರಿಯಂತದ ಸಂಸ್ಥೆಗಳು ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿದೆ. ಇಂದಿನ ಯುವ ಪೀಳಿಗೆಯಲ್ಲಿ ಸಮಾಜ ಸೇವೆ, ಜನಸೇವೆಯ ಅರಿವನ್ನು ಮೂಡಿಸಿ ಉತ್ತಮ ಬಾಂಧವ್ಯವನ್ನು ಬೆಳೆಸಲು ಈ ಸಂಸ್ಥೆಗಳು ತಳಹದಿಯಾಗಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಜೋನ್ 5ರ ಅಸಿಸ್ಟೆಂಟ್ ಗರ್ವನರ್ ಹರ್ಷ ಕುಮಾರ್ ರೈ ಮಾಡವು ಮಾತನಾಡಿ ಇಂಟರ‍್ಯಾಕ್ಟ್ ಎಳೆಯ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಮೈಗೂಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿಗಳು ಸಮಾಜದಲ್ಲಿನ ಅಗತ್ಯತೆಯನ್ನು ಅರಿತುಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ರೋಟರಿ ಸಂಸ್ಥೆಯ ಕಾರ್ಯ ವ್ಯಾಪ್ತಿ, ಉದ್ದೇಶದ ಬಗೆಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವರುಣ್ ಮಾತಾನಾಡಿ ರೋಟರಿ ಕ್ಲಬ್‌ನ ಉದ್ದೇಶವು ತನ್ನನ್ನು ಸಮಾಜಸೇವೆಯಲ್ಲಿ ತೊಡಗಸಿಕೊಳ್ಳುವಂತೆ ಮಾಡಿದೆ ಎಂದರು. ವೇದಿಕೆಯಲ್ಲಿ
ಪುತ್ತೂರು ಇಂಟರ‍್ಯಾಕ್ಟ್ ಕ್ಲಬ್, ರೋಟರಿಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷರಾದ ಜಾನ್ ಕೂಟಿನ್ಹ ಉಪಸ್ಥಿತರಿದ್ದು ಆಯ್ಕೆಗೊಂಡ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ ಎಲ್ಲಾ ಇಂಟರಾಕ್ಟ್ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು.
ರೋಟರಿ ಕ್ಲಬ್ ಪುತ್ತೂರು ಸಿಟಿಯ ಜೊತೆ ಕಾರ್ಯದರ್ಶಿ ರಾಮಚಂದ್ರ , ರೊಟೇರಿಯನ್ ಪ್ರಶಾಂತ್ ಶೆಣೈ, ರೊಟೇರಿಯನ್ ಶಶಿಧರ್ ಕಜೆ, ರೊಟೇರಿಯನ್ ಸ್ವಾತಿ ಮಲಾರ, ರೊಟೇರಿಯನ್ ಅಕ್ಷತಾ ಪೈ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಪದಾಧಿಕಾರಿಗಳು, ಸರ್ವಸದಸ್ಯರು, ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ವರುಣ್, ಉಪಾಧ್ಯಕ್ಷರಾಗಿ ಅತ್ಮಿ, ಕಾರ್ಯದರ್ಶಿಯಾಗಿ ಗ್ಯಾನ್ ವೈ.ಕೆ, ಜತೆ ಕಾರ್ಯದರ್ಶಿಯಾಗಿ ಶಿಭಾ ರೈ, ಕೋಶಾಧಿಕಾರಿಯಾಗಿ ಪನ್ನಗ ರೈ ಟಿ, ಸಾರ್ಜಂಟ್ ಆರ್ಮ್ ನಿಶ್ಚಿತ್ , ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ನಿಹಾಲ್, ಇನ್‌ಸ್ಟಿಟ್ಯೂಷನಲ್ ಸರ್ವೀಸ್ ನಿರ್ದೇಶಕರಾಗಿ ಜೆಸ್ವಿನ್ ಎ ಜೆ, ಕಮ್ಯೂನಿಟಿ ಸರ್ವೀಸ್ ನಿರ್ದೇಶಕರಾಗಿ ಸ್ಪರ್ಶ, ಇಂಟರ್ ನ್ಯಾಷನಲ್ ಸರ್ವೀಸ್ ನಿರ್ದೇಶಕರಾಗಿ ಶೈಲೇಶ್ ಬಿ, ಇಂಟರ‍್ಯಾಕ್ಟ್ ಚೇರ್ಮನ್ ಜೆರೋಮಿಯಾಸ್ ಪಾಯ್ಸ್ ಅದಿಕಾರ ಸ್ವೀಕರಿಸಿದರು. ಇಂಟರ‍್ಯಾಕ್ಟ್ ಕ್ಲಬ್‌ನ ಸಂಯೋಜಕರಾದ ಉಪನ್ಯಾಸಕರಾದ ಸತ್ಯಲತಾ ರೈ ಎಂ ಮತ್ತು ಸುಮಾ ಡಿ ಸಹಕರಿಸಿದರು.
ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷರಾದ ಮೊಹಮ್ಮದ್ ಸಾಹೇಬ್ ಸ್ವಾಗತಿಸಿ, ನೂತನ ಇಂಟರ‍್ಯಾಕ್ಟ್ ಕ್ಲಬ್ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ನೂತನ ಇಂಟರ‍್ಯಾಕ್ಟ್ನ ಕಾರ್ಯದರ್ಶಿ ಗ್ಯಾನ್ ವೈ ಕೆ ವಂದಿಸಿ, ಸದಸ್ಯರಾದ ಸಕೀನಾ ಐಮಾನ್ ಕಾರ್ಯಕ್ರಮ ನಿರೂಪಿಸಿದರು.