ಕಾಣಿಯೂರು: ಶತಮಾನೋತ್ಸವಸ ಸಂಭ್ರಮದಲ್ಲಿರುವ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸಂಘದ ಗಣನೀಯ ಸೇವೆಯನ್ನು ಪರಿಗಣಿಸಿ ದ.ಕ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಆ.14ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಸತತ 10ನೇ ಬಾರಿ ಪ್ರತಿಷ್ಠಿತ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡಿರುವ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019-20ನೇ ಸಾಲಿನಲ್ಲಿ ಅವಿಭಜಿತ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಶೇಕಡಾ 100ರಷ್ಟು ಸಾಲ ವಸೂಲಾತಿಯಾಗಿದ್ದು, ಇದರಲ್ಲಿ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳ ಸಹಕಾರ ಸಂಘಗಳ ಪೈಕಿ ಶೇಕಡಾ 100 ಸಾಲ ವಸೂಲಾತಿಯಾಗಿದ್ದು, ಇದರಲ್ಲಿ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳ ಸಹಕಾರ ಸಂಘಗಳ ಪೈಕಿ ಶೇಕಡಾ 100 ಸಾಲ ವಸೂಲಾತಿಯಾದ ಏಕೈಕ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಚಾರ್ವಾಕ ಪ್ರಾ.ಕೃ.ಪ.ಸ,ಸಂಘವು ಪಾತ್ರವಾಗಿ ಈ ಸನ್ಮಾನಕ್ಕೆ ಭಾಜನವಾಗಿತ್ತು. ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ನಿರ್ದೇಶಕರುಗಳಾದ ಅನಂತಕುಮಾರ್ ಬೈಲಂಗಡಿ, ಪರಮೇಶ್ವರ ಅನಿಲ, ಸುಂದರ ಗೌಡ ದೇವಸ್ಯ, ವಿಶ್ವನಾಥ ಕೂಡಿಗೆ, ರತ್ನಾವತಿ ಮುದುವ, ರಮೇಶ್ ಉಪ್ಪಡ್ಕ, ವೀಣಾ ಅಂಬುಲ, ಶೀಲಾವತಿ ಮುಗರಂಜ, ಲೋಕೇಶ್ ಗೌಡ ಆತಾಜೆ, ದಿವಾಕರ ಗೌಡ ಮರಕ್ಕಡ ಉಪಸ್ಥಿತರಿದ್ದರು.