ಪುತ್ತೂರು: ಒಡಿಯೂರು ಶ್ರೀ ವಜ್ರಮಾತ ಭಜನಾ ಮಂಡಳಿ ಪುತ್ತೂರು ಘಟಕದ ವತಿಯಿಂದ ಸಮರ್ಪಣಾ ಮಹಿಳಾ ವೇದಿಕೆಯ ಸಹಕಾರದೊಂದಿಗೆ “ಆಟಿದ ಪೊರ್ಲು” ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.14 ರಂದು ನಡೆಯಿತು.
ಸಮರ್ಪಣಾ ಗೌರವಾಧ್ಯಕ್ಷೆಯಾಗಿರುವ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ನೇಹಾ ರೈ ಯವರು ಚೆನ್ನೆದ ಮನೆ ಅಟದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಆಟಿಗೆ ಸಂಬಂಧಪಟ್ಟ ವಿವಿಧ ತಿಂಡಿ ತಿನಿಸುಗಳ ಹಾಗೂ ಇತರ ಸ್ಪರ್ಧೆಗಳು ನಡೆಸಿ ಬಹುಮಾನ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅನ್ನಪೂರ್ಣ ಆರ್ ರೈ ಕುತ್ಯಾಡಿ ಆಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಮರ್ಪಣಾ ಅಧ್ಯಕ್ಷೆ ಗಂಗರತ್ನ ಬಿ ರೈ, ವರಮಹಾಲಕ್ಷ್ಮಿಯ ಪೂಜಾ ಸಮಿತಿಯ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ ಶೆಟ್ಟಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಟಿ ಹೆಗ್ಡೆ, ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.
ಸ್ಪರ್ಧೆಗಳ ತೀರ್ಪುಗಾರರಾಗಿ ಡಾ. ರಂಜಿತಾ ಲಿಯೋ ಕ್ಲಬ್ ಪುತ್ತೂರ ಮುತ್ತು ಹಾಗೂ ವತ್ಸಲಾ ಕಾರ್ಯದರ್ಶಿ ಲಯನ್ಸ್ ಕ್ಲಬ್ ಪುತ್ತೂರ ಮುತ್ತು ಇವರು ನಡೆಸಿಕೊಟ್ಟರು.
ಶಾರದ ಅರಸ್, ಯಮುನಾ ಪುಷ್ಪ, ಪದ್ಮ, ವತ್ಸಲಾ ನಾಯಕ್, ಸುಮಂಗಲ ಶೆಣೈ, ಚಂದ್ರಪ್ರಭ, ಚಿತ್ರ, ಮಮತಾ, ಸ್ಮಿತಾ, ನಳಿನಿ, ವೇದಾವತಿ, ವಿದ್ಯಾ, ಚೇತನ್ ಹಾಗೂ ಇತರರು ಸಹಕರಿಸಿದರು. ವಜ್ರಮಾತ ಅಧ್ಯಕ್ಷೆ ನಯನ ರೈ ಸ್ವಾಗತಿಸಿ ನಿರೂಪಿಸಿದರು, ವಜ್ರಮಾತ್ರ ಕಾರ್ಯದರ್ಶಿ ಶಾರದ ಕೇಶವ್ ವಂದಿಸಿದರು.