ದೇಶ ವಿಭಜನೆ ಸಂದರ್ಭ ಹಿಂದೂಗಳ ಮಾರಣಹೋಮ: ಪ್ರದೀಪ್ ಸರಿಪಲ್ಲ
ಉಪ್ಪಿನಂಗಡಿ: ಗಾಂಧಿ- ನೆಹರೂರವರ ಶಂಕಾಸ್ಪದ ನಡೆಯಿಂದಾಗಿ ದೇಶ ವಿಭಜನೆಯ ಸಂದರ್ಭ ಲಕ್ಷಾಂತರ ಹಿಂದೂಗಳ ಮಾರಣಹೋಮವನ್ನು ಜಗತ್ತು ಕಾಣಬೇಕಾಯಿತು ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳದ ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡದ ವತಿಯಿಂದ ಅಖಂಡ ಭಾರತ ಸಂಕಲ್ಪಕ್ಕಾಗಿ ನಡೆದ ಪಂಜಿನ ಮೆರವಣಿಗೆಯ ಬಳಿಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ವಿಭಜನೆಯ ಸಂದರ್ಭ ನಡೆದ ಘನಘೋರ ಕೃತ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ತ್ರಿಖಂಡವಾಗಿರುವ ಭರತ ಭೂಮಿಯನ್ನು ಮತ್ತೆ ಅಖಂಡವಾಗಿಸುವ ನಿಟ್ಟಿನಲ್ಲಿ ಪರಿಶ್ರಮಿಸುವ ಸಲುವಾಗಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಯೋಧ ಎನ್ ವಿಶ್ವನಾಥ ಶೆಣೈ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡ ಅಧ್ಯಕ್ಷ ಸುದರ್ಶನ್, ಅಖಾಡ ಪ್ರಮುಖ್ ಕಿಶೋರ್ ನೀರಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಮುಕುಂದ ಬಜತ್ತೂರು, ಸದಾನಂದ ಶೆಟ್ಟಿ, ಸುರೇಶ್ ಅತ್ರೆಮಜಲು, ಹೇರಂಭ ಶಾಸ್ತ್ರಿ, ಉಮೇಶ್ ಶೆಣೈ, ಸಂತೋಷ್ ಕುಮಾರ್ ಪಂರ್ದಾಜೆ, ಹರಿರಾಮಚಂದ್ರ, ಸುಧೀರ್ ತೆಕ್ಕಾರ್, ಹರೀಶ್ ಬೆದ್ರೋಡಿ, ಕಿಶನ್ ಕಾಂಚನ, ಸಂತೋಷ್ ಅಡೆಕ್ಕಲ್, ಧನಂಜಯ ನಟ್ಟಿಬೈಲು, ವಿಶ್ವನಾಥ ಶೆಣೈ, ಕಂಗ್ವೆ ವಿಶ್ವನಾಥ ಶೆಟ್ಟಿ, ವಿದ್ಯಾಧರ ಜೈನ್, ಕೈಲಾರ್ ರಾಜಗೋಪಾಲ ಭಟ್, ಪ್ರಶಾಂತ್ ಎನ್., ಹರೀಶ್ ಡಿ., ಉಷಾ ಮುಳಿಯ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಚಂದ್ರಶೇಖರ ಮಡಿವಾಳ, ಮಂಜುನಾಥ ಕಂಗಿನಾರ್ ಬೆಟ್ಟು , ಮಹೇಶ್ ಬಜತ್ತೂರು, ಪೂರ್ಣಚಂದ್ರ ಕಾಂಚನ, ತಿಮ್ಮಪ್ಪ ಗೌಡ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು.
ವಿಮೇಶ್ ವಿ. ಶೆಟ್ಟಿ ವಂದೇ ಮಾತರಂ ಹಾಡಿದರು. ಪ್ರಖಂಡ ಕಾರ್ಯದರ್ಶಿ ರಾಜಶೇಖರ್ ಕರಾಯ ಸ್ವಾಗತಿಸಿದರು. ಪ್ರಖಂಡ ಸಂಯೋಜಕ ಸಂತೋಷ್ ಪೆರಿಯಡ್ಕ ವಂದಿಸಿದರು.