





ಪುತ್ತೂರು : ಪುತ್ತೂರು ಯುವಕ ವೃಂದ (ರಿ) ಕಲ್ಲಾರೆ ಇದರ ವತಿಯಿಂದ ಆಚರಿಸಲ್ಪಡುವ 45ನೇ ವರುಷದ ಮೊಸರು ಕುಡಿಕೆ ಉತ್ಸವ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆ.15 ರಂದು ರಾಘವೇಂದ್ರ ಮಠದಲ್ಲಿ ನೆರವೇರಿತು.


ಶ್ರೀ ಗುರು ರಾಘವೇಂದ್ರ ಮಠ ಕಲ್ಲಾರೆ ಇದರ ಪ್ರಧಾನ ಅರ್ಚಕರಾದ ರಾಘವೇಂದ್ರ ಉಡುಪ ಇವರು ಧಾರ್ಮಿಕ ಕೈಂಕರ್ಯ ನೆರವೇರಿಸಿ , ಆಮಂತ್ರಣ ಬಿಡುಗಡೆಗೆ ಚಾಲನೆ ನೀಡಿ , ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು. ಈ ವೇಳೆ ನಗರಸಭಾ ಸದಸ್ಯ ಮನೊಹರ್ ಕಲ್ಲಾರೆ, ರೋಹನ್ ಕಲ್ಲಾರೆ, ಬಿಫಿನ್‌ಕ ಲ್ಲಾರೆ, ಉದಯ್ ಕುಮಾರ್ ಹೆಚ್ , ಚಂದ್ರಶೇಖರ ಕಲ್ಲಾರೆ, ಭವಿಷ್ಯತ್ ಕಲ್ಲಾರೆ, ಶಿವಪ್ರಸಾದ್ ಕಲ್ಲಾರೆ ಮತ್ತು ಅರುಣ್ ಕುಮಾರ್ ಕಲ್ಲಾರೆ ಮೊದಲಾದವರು ಹಾಜರಿದ್ದರು.















