ಪೇರಲ್ತಡ್ಕ ಮಸೀದಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ, ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಇರ್ದೆ ಪೇರಲ್ತಡ್ಕ ಬದ್ರಿಯಾ ಜುಮಾ ಮಸೀದಿ ಮತ್ತು ಹಿದಾಯತ್ತುಲ್ ಇಸ್ಲಾಂ ಮದರಸ ವತಿಯಿಂದ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸಲಾಯಿತು‌.
ಜಮಾಅತ್ ಅಧ್ಯಕ್ಷರಾದ ಎಂ ಮುಹಮ್ಮದ್ ಹಾಜಿ (ನವಾಜ್) ಧ್ವಜಾರೋಹಣಗೈದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬರಾದ ಅಬ್ದುಲ್ ಹಮೀದ್ ಮದನಿ ದುವಾ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಸಂದೇಶ ಭಾಷಣ ಮಾಡಿದರು. ಸದರ್ ಮುಹಲ್ಲಿಂ ಹನೀಫ್ ಅಸ್ಲಮಿ ಸೊರಕೆಯವರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಭಾಷಣದೊಂದಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಮಾಅತಿನ ಹಿರಿಯರಾದ ಮೊಯಿದು ಕುಂಞಿ ಬಾಳುಮೂಲೆಯವರನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು.

ಮದ್ರಸ ವಿದ್ಯಾರ್ಥಿಗಳಿಂದ ಮಲಯಾಲಂ, ಕನ್ನಡ ,ಇಂಗ್ಲಿಷ್ ಭಾಷೆಗಳಲ್ಲಿ ಸಂದೇಶ ಭಾಷಣ ನಡೆಯಿತು. ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮದ್ರಸ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಮಾಅತಿನ ಉಪಾಧ್ಯಕ್ಷ ಪಿ ಐ ಮುಹಮ್ಮದ್ ಮದನಿ ಪೇರಲ್ತಡ್ಕ, ಪ್ರ.ಕಾರ್ಯದರ್ಶಿ ಹನೀಫ್ ಪೊಸೋಟಿಮಾರ್, ಕೋಶಾಧಿಕಾರಿ ಶರೀಫ್ (ರೋಯಲ್)ಕುಂಞಿಲಡ್ಕ, ಜೊತೆ ಕಾರ್ಯದರ್ಶಿಗಳಾದ ಪಿ.ಎ ಹಸೈನಾರ್ ಪೇರಲ್ತಡ್ಕ, ಅಝೀಝ್ ಕುಂಞಿಲಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ ಎಂ ಹಮೀದ್ ಕೊಮ್ಮೆ ಮ್ಮಾರ್, ಶಾಫಿ ಬೊಳ್ಳಿಂಬಳ, ಕಾಸಿಂ ಪೇರಲ್ತಡ್ಕ, ಮಹಮ್ಮದ್ ಬೇರಿಕೆ ಹಾಗೂ ಜಮಾಅತಿನ ಸದಸ್ಯರು, ಜಮಾಅತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here