ಪುಣಚ : ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಎಸ್ ಮಹಮ್ಮದ್ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಶಾಲಾ ಆಡಳಿತ ಸಮಿತಿ ಸಂಚಾಲಕಿ ಉಷಾಲಕ್ಷ್ಮಿ ಮಣಿಲ, ಶಾಲಾ ಮುಖ್ಯ ಗುರು ರಾಮಚಂದ್ರರಾವ್, ನಿವೃತ್ತ ಮುಖ್ಯ ಗುರು ಹರ್ಷ ಶಾಸ್ತ್ರಿ ಮಣಿಲ, ಗ್ರಾ.ಪಂ ಅಧ್ಯಕ್ಷೆ ಬೇಬಿ ಪಟಿಕಲ್ಲು, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಅಭಿವೃದ್ಧಿ ಅಧಿಕಾರಿ ರವಿ, ಸದಸ್ಯರು, ಸಿಬ್ಬಂದಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಘೋಷಣೆ, ಜೈಕಾರದೊಂದಿಗೆ ಮೆರವಣಿಗೆ ನಡೆಯಿತು.
