ನರಿಮೊಗರು: ಪಂಜಳ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ನರಿಮೊಗರು: ನರಿಮೊಗರು ಗ್ರಾಮದ ಪಂಜಳ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ರೈ ಶಿಬರ ಧ್ವಜಾರೋಹಣ ನೆರವೇರಿಸಿದರು.
ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಣಿ ಸದಸ್ಯರಾದ ಸುಧಾಕರ್ ಕುಲಾಲ್, ಮಲ್ಲಿಕಾಲತಾ, ಬಾಲವಿಕಾಸ ಸಮಿತಿ ಸದಸ್ಯರು ಮಕ್ಕಳ ಪೋಷಕರು ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಸ್ಥಳೀಯರು ಉಪಸಿತರಿದ್ದರು.

ಶ್ರೀರಾಮ ಫ್ರೆಂಡ್ಸ್ ಪಂಜಳ ಇವರು ಉಪಹಾರದ ವ್ಯವಸ್ಥೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನರಿಮೊಗರು, ಯುವಕ ಮಂಡಲ ನರಿಮೊಗರು, ಪುರಂದರ ಗೌಡ ಗಂಗೇಯ ಸ್ಟೋರ್, ಗೀತಾ ಪಂಜಳ, ಮಂಜುಳಾ ಗುಣಕರ, ಜುಬೇರ್ ಪಂಜಳ, ಫಾತಿಮಾ ಪಂಜಳ, ಭವಾನಿ, ಪದ್ಮಾವತಿ, ರಮ್ಲತ್ ಇವರು ಸಿಹಿ ತಿಂಡಿ ನೀಡಿ ಸಹಕರಿಸಿದರು. ಕೇಂದ್ರದ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ತೃಪ್ತಿ, ಮೇಘ, ಸಿಂಧೂರ, ಸಿಂಚನ, ಸ್ತ್ರೀ ಶಕ್ತಿ ಸಂಘದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here