ಪುತ್ತೂರು: ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರಶಾಂತ್ ನೆಕ್ಕಿಲಾಡಿಯವರು 34 ನೆಕ್ಕಿಲಾಡಿಯ ಶಿವಾಜಿನಗರ ನಿವಾಸಿಯಾಗಿದ್ದು, ಬಿಜೆಪಿ ಕಾರ್ಯಕರ್ತ ಹಾಗೂ ಸಂಘಪರಿವಾರದ ಸ್ವಯಂಸೇವಕನಾಗಿದ್ದಾರೆ.13 ವರ್ಷಗಳಿಂದ 34 ನೆಕ್ಕಿಲಾಡಿ ಗ್ರಾ.ಪಂ.ಸದಸ್ಯರಾಗಿರುವ ಇವರು, ಕಳೆದ ಅವಧಿಯಲ್ಲಿ ಎರಡೂವರೆ ವರ್ಷಗಳ ಕಾಲ ಗ್ರಾ.ಪಂ.ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.ನೆಕ್ಕಿಲಾಡಿಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿ, ಗ್ರಾಮ ಸಮಿತಿ ಕಾರ್ಯದರ್ಶಿಯಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.ಕಳೆದ ಆರು ವರ್ಷಗಳಿಂದ ಆದರ್ಶನಗರದ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಬಾರಿ 34 ನೆಕ್ಕಿಲಾಡಿಯ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭ ಅವರು ಪುತ್ತಿಲ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದರಲ್ಲದೆ ಪುತ್ತಿಲ ಪರಿವಾರದ ತಾಲೂಕು ಉಪಾಧ್ಯಕ್ಷರೂ ಆಗಿದ್ದರು.ಪುತ್ತಿಲ ಪರಿವಾರದಿಂದ ನಡೆದ ಶ್ರೀನಿವಾಸ ಕಲ್ಯಾಣದ ಕಾರ್ಯಕ್ರಮದ ಸ್ವಾಗತ ಸಮಿತಿಯ ಸಂಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ನೆಕ್ಕಿಲಾಡಿ ಮೋಕ್ಷಧಾಮ ಹಿಂದೂ ರುದ್ರಭೂಮಿಯ ಅಧ್ಯಕ್ಷರೂ ಆಗಿದ್ದಾರೆ.ತಾಲೂಕು ಯುವಗಾಣಿಗ ಸಂಘದ ಕಾರ್ಯದರ್ಶಿಯಾಗಿ, ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಮಠದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.ನೆಕ್ಕಿಲಾಡಿ ವಿಶ್ವಮಿತ್ರ ಯುವಕ ಮಂಡಲದ ಸದಸ್ಯರಾಗಿರುವ ಇವರು ತಂದೆ ಶ್ರೀನಿವಾಸ ಯು, ತಾಯಿ ಚಂದ್ರಾವತಿ, ಪತ್ನಿ ಜ್ಯೋತಿ ಪಿ.ಎನ್, ಪುತ್ರರಾದ ಇಹಾನ್ ಮತ್ತು ತೃಷಾನ್ ಅವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.
Home ಇತ್ತೀಚಿನ ಸುದ್ದಿಗಳು ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ನೆಕ್ಕಿಲಾಡಿ ನೇಮಕ