ಚೆನ್ನಾವರ ಸ.ಕಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ.ಶಾಲೆಯಲ್ಲಿ ಧ್ವಜಾರೋಹಣವನ್ನು ಸಾಮಾಜಿಕ ಮುಂದಾಳು ಬಾಲಕೃಷ್ಣ ರೈ ಚೆನ್ನಾವರ ಹಾಗೂ ಚೆನ್ನಾವರ ಸಿರಾಜುಲ್ ಮದರಸದ ಖತೀಬ ಅಬ್ಬಾಸ್ ಮುಸ್ಲಿಯಾರ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರಂದರ ಕೆ,ಉಪಾಧ್ಯಕ್ಷೆ ಜಯಂತಿ ರೈ ನೆಲ್ಯಾಜೆ,ಅಭ್ಯುದಯ ಯುವಕ ಮಂಡಲದ ಅಧ್ಯಕ್ಷ ಪುಟ್ಟಣ್ಣ ನಾಯ್ಕ,ಚೆನ್ನಾವರ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಶರೀಫ್,ಸದಸ್ಯ ಮಹಮ್ಮದ್ ಶರೀಫ್, ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷರಾದ ಹನೀಫ್ ಕುಂಡಡ್ಕ,ಹನೀಫ್ ಇಂದ್ರಾಜೆ,ಚೆನ್ನಾವರ ಅಂಗನವಾಡಿ ಕಾರ್ಯಕರ್ತೆ ನಳಿನಿ ರೈ ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಸದಸ್ಯರಾದ ಸತೀಶ್ ಅಂಗಡಿಮೂಲೆ, ಹರಿಕಲಾ ರೈ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಶಾಲಾ ಮುಖ್ಯಗುರು ಮಲ್ಲೇಶ್ ಎಚ್.ಎಂ. ಅವರು ಸ್ವಾಗತಿಸಿದರು. ಶಿಕ್ಷಕರಾದ ಭವ್ಯಾ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here