*106 ಸ್ಪರ್ಧಿಗಳು
*12 ರಸಪ್ರಶ್ನೆಗಳು
*ಪ್ರಥಮ,ದ್ವಿತೀಯ,ತೃತೀಯ ಅಲ್ಲದೆ ಎಲ್ಲಾ ಸ್ಪರ್ಧಿಗಳಿಗೂ ಬಹುಮಾನಗಳು
ಪುತ್ತೂರು: ದರ್ಬೆ ಬುಶ್ರಾ ಟವರ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರಿನ ಪ್ರತಿಷ್ಠಿತ ನಯಾ ಚಪ್ಪಲ್ ಬಜಾರ್ ಮಳಿಗೆಯು ಪ್ರಪ್ರಥಮ ಬಾರಿಗೆ ಸ್ವಾತಂತ್ರೋತ್ಸವದ ಅಂಗವಾಗಿ ವಿನೂತನ ರಸಪ್ರಶ್ನೆ ಸ್ಪರ್ಧೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಆ.15 ರಂದು ನಯಾ ಚಪ್ಪಲ್ ಬಜಾರ್ ಮಳಿಗೆಯಲ್ಲಿ ಜರಗಿತು.
ಸಂಘಟಕರು ಸ್ಪರ್ಧಿಗಳಿಗೆ ಹನ್ನೆರಡು ಪ್ರಶ್ನೆಗಳನ್ನು ನೀಡಿದ್ದು ಅವನ್ನು ಅಂಚೆ ಮೂಲಕ ಉತ್ತರಿಸುವ ಅವಕಾಶವನ್ನು ಒದಗಿಸಲಾಗಿತ್ತು. ಆಗಸ್ಟ್ 13ರ ಒಳಗೆ ಉತ್ತರ ತಲುಪುವಂತಾಗಬೇಕು ಮಾತ್ರವಲ್ಲ ಪ್ರಥಮ, ದ್ವಿತೀಯ, ತೃತೀಯ ಮತ್ತು 7 ಆಕರ್ಷಕ ಬಹುಮಾನಗಳನ್ನು ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ ಬಾಕಿ ಉಳಿದ ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನವನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು.
106 ಸ್ಪರ್ಧಿಗಳು:
ಒಟ್ಟು 106 ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ಬಹುಮಾನವನ್ನು ಆಲಂಕಾರು ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲೆಯ ನಿಹಾಲ್ ರೈ, ದ್ವಿತೀಯ ಬಹುಮಾನವನ್ನು ಬೆಥನಿ ಪ್ರಾಥಮಿಕ ಶಾಲೆಯ ಮಹುಮ್, ತೃತೀಯ ಬಹುಮಾನವನ್ನು ಕುದ್ರೋಳಿ ಬ್ರೈಟ್ ಶಾಲೆಯ ಸಿಮ್ರಾರವರು ಪಡೆದುಕೊಂಡಿದ್ದು, ದರ್ಬೆ ಬೆಥನಿ ಶಾಲೆಯ ಅಲೂಫ್, ಗೇರುಕಟ್ಟೆ ಶಾಲೆಯ ಕಿಫಾ ಖದೀಜ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಫಾಮಿಯಾ, ಸುದಾನ ಶಾಲೆಯ ಮೈಝ್ ಎಂ.ಜಿ, ಸಂತ ವಿಕ್ರ‍್ಸ್ ಶಾಲೆಯ ಹಮೀಜ್ ಎಂ, ಉಪ್ಪಿನಂಗಡಿ ಶಾಲೆಯ ನಾಶೂಕ್, ಹಯಾ ಖದೀಜರವರು ಹೀಗೆ ಏಳು ಮಂದಿ ಆಕರ್ಷಕ ಬಹುಮಾನಗಳ ವಿಜೇತರಾಗಿರುತ್ತಾರೆ. ಉಳಿದ 96 ಮಂದಿ ಸ್ಪರ್ಧಾಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ಮಳಿಗೆಯ ವತಿಯಿಂದ ನೀಡಲಾಯಿತು.
12 ರಸಪ್ರಶ್ನೆಗಳು ಯಾವುದು:
1)ಕರ್ನಾಟಕದಲ್ಲಿ ಮೊತ್ತ ಮೊದಲ ಸ್ವಾತಂತ್ರ‍್ಯ ಸಂಗ್ರಾಮ ನಡೆದ ಸ್ಥಳ ಯಾವುದು? 2)ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು?, 3)ಪ್ರಪಂಚದ ಅತೀ ದೊಡ್ಡ ಸರೋವರ ಯಾವುದು?, 4)ಮಹಾಭಾರತದಲ್ಲಿ ಬರುವ ಜನಮೇಜಯನ ತಂದೆ ಯಾರು?, 5)ಆಗಸ್ಟ್ 15 ರಂದು ಸ್ವಾತಂತ್ರ‍್ಯ ದಿನವನ್ನಾಗಿ ಆಚರಿಸಲು ಹೇಳಿದವರು ಯಾರು?, 6)ಇಂಕಿಲಾಬ್ ಜಿಂದಾಬಾದ್ ಈ ಘೋಷಣೆ ಕೊಟ್ಟವರು ಯಾರು?, 7) ಉಪ್ಪಿನ ಸತ್ಯಾಗ್ರಹದ ವೇಳೆ ಮಹಾತ್ಮ ಗಾಂಧಿಯವರು ಇತರ ಸಾವಿರಾರು ಸ್ವಾತಂತ್ರ‍್ಯ ವೀರರೊಂದಿಗೆ ಯಾವ ಸ್ಥಳದಿಂದ ಎಲ್ಲಿಯ ತನಕ ಪಾದಯಾತ್ರೆ ಕೈಗೊಂಡರು?, 8)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಯಾರು?, 9)ನಮ್ಮ ರಾಷ್ಟ್ರಧ್ವಜವನ್ನು ಯಾರು ವಿನ್ಯಾಸಗೊಳಿಸಿದವರು?, 10)ಅಸಹಕಾರ ಚಳುವಳಿ ಯಾವಾಗ ಜರಗಿತು?, 11)ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಯಾರು?, 12)ಬುಶ್ರಾ ಟವರ್ಸ್ ನಲ್ಲಿನ ನಯಾ ಚಪ್ಪಲ್ ಬಜಾರ್ ಪ್ರಥಮವಾಗಿ ಉದ್ಘಾಟನೆಗೊಂಡ ದಿನಾಂಕ ಯಾವುದು? ಹೀಗೆ ವಿದ್ಯಾರ್ಥಿಗಳಿಗೆ ಹನ್ನೆರಡು ಪ್ರಶ್ನೆಗಳನ್ನು ಉತ್ತರಿಸುವ ಅವಕಾಶವನ್ನು ನಯಾ ಚಪ್ಪಲ್ ಬಜಾರ್ ನೀಡಿರುತ್ತದೆ.
ರೋಟರಿ ಕ್ಲಬ್ ಪುತ್ತೂರು ಸದಸ್ಯರಾದ ಪ್ರೊ|ಸುಬ್ಬಪ್ಪ ಕೈಕಂಬ ಹಾಗೂ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿಯವರು ರಸಪ್ರಶ್ನೆ ತಯಾರಿಕೆ ಹಾಗೂ ಮೌಲ್ಯಮಾಪನದಲ್ಲಿ ಸಹಕರಿಸಿದರು.ನಯಾ ಚಪ್ಪಲ್ ಬಜಾರ್ ಮಳಿಗೆಯ ಪಾಲುದಾರ ರಫೀಕ್ ಎಂ.ಜಿ ಸ್ವಾಗತಿಸಿ, ಸಿಬ್ಬಂದಿ ಸುಮಲತಾ ವಂದಿಸಿದರು. ಮಳಿಗೆಯ ಮತ್ತೋರ್ವ ಪಾಲುದಾರ ಸಿದ್ಧೀಕ್, ಮ್ಯಾನೇಜರ್ ಪ್ರಶಾಂತ್ ಹಾಗೂ ಸಿಬ್ಬಂದಿ ಸಹಕರಿಸಿದರು.
ವಿಜೇತರ ಆಯ್ಕೆ/ಬಹುಮಾನ ವಿತರಣೆ..
ಆ.14 ರಂದು ಸಂಜೆ ಮಳಿಗೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಏಳು ಆಕರ್ಷಕ ಬಹುಮಾನಗಳನ್ನು ಡ್ರಾ ಮೂಲಕ ವಿಜೇತರ ಆಯ್ಕೆ ಮಾಡಲಾಯಿತು. ಚೀಟಿ ಎತ್ತುವಿಕೆ ಕಾರ್ಯಕ್ರಮದಲ್ಲಿ ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ವಾಮನ್ ಪೈ, ಕಾರ್ಯದರ್ಶಿ ಮನೋಜ್ ಟಿ.ವಿ, ರೋಟರಿ ಪುತ್ತೂರು ಹಿರಿಯ ಸದಸ್ಯ ಸುರೇಶ್ ಶೆಟ್ಟಿ, ಮಳಿಗೆಯ ಮಾಲಕ ರಫೀಕ್ ಎಂ.ಜಿರವರು ನಡೆಸಿಕೊಟ್ಟರು. ಸ್ವಾತಂತ್ರ್ಯ ದಿನದಂದು ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಎಂ.ಜಿ ರೈ ಹಾಗೂ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ವಿನೂತನ ಸಮಾಜಮುಖಿ ಕಾರ್ಯಕ್ರಮ..
ರಫೀಕ್ ಎಂ.ಜಿರವರ ಮುಂಧಾಳತ್ವದಲ್ಲಿ ರಜಾ ದಿನಗಳಲ್ಲಿ ಸಂಸ್ಥೆಯಲ್ಲಿ ದುಡಿಯಲು ಬಂದಂತಹ ವಿದ್ಯಾರ್ಥಿಗಳಿಗೆ ಸನ್ಮಾನ, ಕಾರ್ಮಿಕರ ದಿನದಂದು ಕಾರ್ಮಿಕರಿಗೆ ಸನ್ಮಾನ, ಡಾಕ್ಟರ‍್ಸ್ ಡೇ ದಿನದಂದು ವೈದ್ಯರುಗಳಿಗೆ ಸನ್ಮಾನ, ಕಾರ್ಗಿಲ್ ವಿಜಯೋತ್ಸವ ದಿನದಂದು ಮಾಜಿ ಸೈನಿಕರಿಗೆ ಸನ್ಮಾನ ಹೀಗೆ ವಿನೂತನ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಮುಂದಿನ ಶಿಕ್ಷಕರ ದಿನಾಚರಣೆಯಂದು ರಫೀಕ್ ಎಂ.ಜಿರವರ ಬಾಲ್ಯದ ಟೀಚರ್‌ರವರನ್ನು ಸನ್ಮಾನಿಸುವ ಕಾರ್ಯಕ್ರಮ ಜರಗಲಿದೆ.