ಸವಣೂರು: ಸವಣೂರು ಗ್ರಾ.ಪಂ.ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಭಿನಂದನಾ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.
2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಸವಣೂರು ಪ್ರೌಢಶಾಲೆ,ಮಂಜುನಾಥನಗರ ಪ್ರೌಢಶಾಲೆಯ ಶಿಕ್ಷಕ ವೃಂದವನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಂಜುನಾಥನಗರ ಸರಕಾರಿ ಪ್ರೌಢಶಾಲಾ ಮುಖ್ಯಗುರು ಶಿವಕುಮಾರ್ ಎನ್.ಜಿ ಹಾಗೂ ಸವಣೂರು ಸರಕಾರಿ ಪ್ರೌಢಶಾಲಾ ಮುಖ್ಯಗುರು ರಘು ಬಿ.ಆರ್ ಕೃತಜ್ಞತೆ ಸಲ್ಲಿಸಿ ಮುಂದಿನ ದಿನಗಳಲ್ಲಿಯೂ ಶೇ.100 ಫಲಿತಾಂಶ ದಾಖಲಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ, ಪೋಷಕ ರ ಸಹಕಾರದೊಂದಿಗೆ ಶ್ರಮಿಸುತ್ತೇವೆ ಎಂದರು.
ನಿವೃತ್ತ ಅಂಗನವಾಡಿ ಶಿಕ್ಷಕರಾದ ಸುಮಂಗಲಾ ಮಂಜುನಾಥನಗರ, ಲಕ್ಷ್ಮೀ ಬೇರಿಕೆ ಪಾಲ್ತಾಡಿ ಅವರನ್ನು ಗೌರವಿಸಲಾಯಿತು. ಸುಮಂಗಲಾ ಮಂಜುನಾಥನಗರ ಮಾತನಾಡಿ, ಕೃತಜ್ಞತೆ ಸಲ್ಲಿಸಿದರು. ಅವಿರತ ಸಾಹಸಿಕ ಸೇವೆಗೈಯುತ್ತಿರುವ ಸವಣೂರು, ಕುಂಬ್ರ ಮೆಸ್ಕಾಂ ಜೆಇ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕುಂಬ್ರ ಮೆಸ್ಕಾಂ ಜೆಇ ರವೀಂದ್ರ ಹಾಗೂ ಸವಣೂರು ಮೆಸ್ಕಾಂ ಜೆಇ ರಾಜೇಶ್ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಸವಣೂರು ಗ್ರಾ.ಪಂ.ನ ಗ್ರಂಥಪಾಲಕಿ ಶಾರದಾ ಮಾಲೆತ್ತಾರು ಅವರನ್ನು ಸನ್ಮಾನಿಸಲಾಯಿತು. ಸವಣೂರು ಗ್ರಾ.ಪಂ.ನಲ್ಲಿ 13 ವರ್ಷ ಲೆಕ್ಕಸಹಾಯಕರಾಗಿದ್ದು ಗ್ರೇಡ್ 1 ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ ಮನ್ಮಥ ಎ. ಅವರನ್ನು ಸನ್ಮಾನಿಸಿ ಅಭಿನಂದಿಸಿ,ಚಿನ್ನದ ಉಂಗುರು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮನ್ಮಥ ಎ.ಅವರು ಬೆಳಂದೂರು ಗ್ರಾ.ಪಂ.ನಲ್ಲಿ ಕೆಲಸ ಮಾಡಿ ಪದೋನ್ನತಿ ಪಡೆದು ಸವಣೂರು ಗ್ರಾ.ಪಂ.ಗೆ ಲೆಕ್ಕಸಹಾಯಕರಾಗಿ ಸೇರ್ಪಡೆಯಾಗಿ ಗ್ರಾ.ಪಂ.ಹಾಗೂ ಜನತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ.ಈ ಅವಧಿಯಲ್ಲಿ ಪ್ರಭಾರ ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿದ್ದು, ಕೊರೊನಾ ಮಹಾಮಾರಿ ಬಂದ ಸಮಯದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಜನತೆಯ ಸಹಕಾರ ಉತ್ತಮವಾಗಿತ್ತು.ನನ್ನ ಅವಧಿಯಲ್ಲಿ ಉತ್ತಮ ಸೇವೆ ನೀಡಿದ ತೃಪ್ತಿ ನನಗಿದೆ.ಈ ಸಂದರ್ಭದಲ್ಲಿ ಅಮೃತ ಗ್ರಾಮ ಪುರಸ್ಕಾರ ಹಾಗೂ ಗಾಂಧಿ ಗ್ರಾಮ ಪುರಸ್ಕಾರ ಸವಣೂರು ಗ್ರಾ.ಪಂ.ಗೆ ಸಿಕ್ಕಿದೆ.ಅಲ್ಲದೆ ಸಣ್ಣ ಕಚೇರಿಯಲ್ಲಿ ಇದ್ದ ಗ್ರಾ.ಪಂ.ಈಗ ಎರಡು ಅಂತಸ್ತಿನ ಕಟ್ಟಡದ ಜತೆಗೆ ಸಭಾಂಗಣ ನಿರ್ಮಾಣವಾಗಿದೆ. ಅಲ್ಲದೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಿದೆ.ಈ ಪ್ರಗತಿಗಳು ಖುಷಿ ತರಿಸಿದೆ ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ, ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಅಬ್ದುಲ್ ರಝಾಕ್,ಚೆನ್ನು ಮುಂಡತಡ್ಕ, ಸತೀಶ್ ಅಂಗಡಿಮೂಲೆ,ರಾಜೀವಿ ಶೆಟ್ಟಿ, ಬಾಬು ಎನ್.,ಶೀನಪ್ಪ ಶೆಟ್ಟಿ ನೆಕ್ರಾಜೆ,ಭರತ್ ರೈ ,ಹರೀಶ್ ಕಾಯರಗುರಿ, ತೀರ್ಥರಾಮ ಕೆಡೆಂಜಿ,ತಾರಾನಾಥ ಬೊಳಿಯಾಲ,ಯಶೋಧಾ,ಚಂದ್ರಾವತಿ ಸುಣ್ಣಾಜೆ,ವಿನೋದಾ ರೈ ,ಹರಿಕಲಾ ರೈ ,ಚೇತನಾ ಶಿವಾನಂದ, ಶಬೀನಾ ,ಇಂದಿರಾ ಬೇರಿಕೆ ,ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ,ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಾಜಿ ಸದಸ್ಯ ಸತೀಶ್ ಬಲ್ಯಾಯ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಪ್ರಮೋದ್, ದಯಾನಂದ ಅವರು ಎ.ಮನ್ಮಥ ಅವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸಿಬ್ಬಂದಿಗಳಾದ ಜಯಶ್ರೀ, ಜಯಾ.ಕೆ, ದೀಪಿಕಾ ,ಯತೀಶ್ ಸಹಕರಿಸಿದರು. ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಅವರು ಕಾರ್ಯಕ್ರಮ ನಿರೂಪಿಸಿದರು.