ಕಡಬ ಮಾದರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಕಡಬ: ಇಲ್ಲಿನ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ಧ್ವಜಾರೋಹಣ ಎಸ್.ಡಿ.ಎಂ.ಸಿ ಅಧ್ಯಕ್ಷ ವಿನೋದ್ ಕುಮಾರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಕಿಟ್ಟಣ್ಣರೈ, ಸರೋಜಿನಿ ಆಚಾರ್ಯ, ಶ್ರೀದೇವಿ ಗೋಲ್ಡ್ ಪ್ಯಾಲೆಸ್ ನ ಮಾಲಕ ದಿನೇಶ್ ಆಚಾರ್ಯ, ನಿವೃತ್ತ ಶಿಕ್ಷಕರಾದ ಸಾಂತಪ್ಪ ಗೌಡ ಪಿಜಕ್ಕಳ, ಜನಾರ್ದನ ಗೌಡ ಪಣೆಮಜಲು ಎಸ್. ಡಿ.ಎಂ.ಸಿ ಉಪಾಧ್ಯಕ್ಷೆ ಕುಸುಮಾವತಿ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕ ವೃಂದದವರು, ಅಂಗನವಾಡಿ ಶಿಕ್ಷಕಿ ಸುಮಿತ್ರ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸೌಂದರ್ಯಗೊಳಿಸಿದ ಶಾಲಾ ಸಭಾಂಗಣಕ್ಕೆ ದೇಣಿಗೆ ನೀಡಿದ ಸಂಧ್ಯಾ ಇವರ ಪರವಾಗಿ ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಪಿಜಕ್ಕಳ ಇವರು ಸಭಾಂಗಣವನ್ನು ಉದ್ಘಾಟಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಿನೋದ್ ಕುಮಾರ್ ದಾನಿಗಳಾದ ಸಾಂತಪ್ಪ ಗೌಡ ಪಿಜಕ್ಕಳ, ದಯಾನಂದ ಪ್ರಭು ಇವರ ಪರವಾಗಿ ಅವರ ಪುತ್ರ ಚೇತನ್ ಪ್ರಭು, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯಕ್, ನಿವೃತ್ತ ಶಿಕ್ಷಕರಾದ ಜನಾರ್ಧನ ಗೌಡ ಪಣೆಮಜಲು, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಫಝಲ್ ಕೋಡಿಂಬಾಳ, ಯೋಜನಾ ಒಕ್ಕೂಟ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಎಸ್.ಡಿ.ಎಂ.ಸಿ ಯ ಸರ್ವ ಸದಸ್ಯರು ಪೋಷಕ ವೃಂದದವರು ಶಿಕ್ಷಕ ವೃಂದ ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಾನಿಗಳಾದ ಸಾಂತಪ್ಪಗೌಡ ಹಾಗೂ ಚೇತನ್ ಪ್ರಭು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅತಿಥಿಗಳು ಸಂದರ್ಭೋಚಿತವಾಗಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಶಿಕ್ಷಕರಾದ ಆನಂದ ಅಜಿಲ ಸ್ವಾಗತಿಸಿ ಸಹ ಶಿಕ್ಷಕರಾದ ಶೋಭಾ .ಬಿ ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕಿಯಾದ ತೀರ್ಥಾವತಿ .ಐ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕರಾದ ಚೈತ್ರಾಯು. ಬಿ, ಜಯಶ್ರೀ, ಸವಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here