ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಫಿಲೋಮಿನಾ ದಿನಾಚರಣೆ ಹಾಗೂ ಶಾಲಾ ಅಮೃತ ಮಹೋತ್ಸವದ ಉದ್ಘಾಟನೆ

0

ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಪಾಲಕಿ ಸಂತ ಫಿಲೋಮಿನಾಳ ಹಬ್ಬ ಹಾಗೂ ಶಾಲಾ ಅಮೃತ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ಆ.10ರಂದು ನಡೆಯಿತು.

ಕೃತಜ್ಞತಾ ಬಲಿ ಪೂಜೆಯನ್ನು ಸಂಸ್ಥೆಯ ದಿವ್ಯ ಚೇತನ ಮಂದಿರದಲ್ಲಿ ಅರ್ಪಿಸಲಾಯಿತು.ಬಲಿ ಪೂಜೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಗುರು ಅತಿ ವಂದನೀಯ ಮೊನ್ಸಿಂಜೋರ್ ಮ್ಯಾಕ್ಸಿಂ ಲಾರೆನ್ಸ್ ನರೋನ್ನಾ ನೆರವೇರಿಸಿದರು. “ಸ್ವರ್ಗೀಯ ಸಂಗತಿಗಳಲ್ಲಿ ಆಸಕ್ತಿ ಇಟ್ಟು ಶಾಂತಿ ದೂತರಾಗಿರಿ” ಎಂಬ ಸಂದೇಶವನ್ನು ದೇವರ ವಾಕ್ಯದ ಮೂಲಕ ನೀಡಿದರು.

ಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶಾಲೆಯ ಅಮೃತ ಮಹೋತ್ಸವದ ಉದ್ಘಾಟನೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಅತಿ ವಂದನೀಯ ಮೊನ್ಸಿಂಜೋರ್ ಮ್ಯಾಕ್ಸಿಮ್ ಲಾರೆನ್ಸ್ ನರೋನ್ನಾ ನೆರವೇರಿಸಿ ಮಾತನಾಡಿ “ಈ ಶಿಕ್ಷಣ ಸಂಸ್ಥೆಯು ಮಕ್ಕಳ ಒಳಿತಿಗಾಗಿ ವಿವಿಧ ಚಟುವಟಿಕೆಗಳ ಮೂಲಕ ಮೌಲ್ಯಧಾರಿತ ಶಿಕ್ಷಣವನ್ನು ನಡೆಸುತ್ತಾ ಬಂದಿದೆ. 75 ವರ್ಷದ ಈ ಅಮೃತ ಮಹೋತ್ಸವವು ಶುಭವನ್ನು ತರಲಿ. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಈ ವಿದ್ಯಾಸಂಸ್ಥೆಯು ಕಾರಣಕರ್ತವಾಗಲಿ” ಎಂದು ಶುಭ ಹಾರೈಸಿದರು. ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತಿ ವಂ. ಫಾ.ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಇಂದಿನ ಮಕ್ಕಳು ಚಿಕ್ಕಪುಟ್ಟ ಒಳ್ಳೆಯ ಕೆಲಸಗಳನ್ನು ಮಾಡಿ ಸಂತ ಫಿಲೋಮಿನಾರಂತೆ ಸಂತರಾಗಲು ಸಾಧ್ಯ ಎಂದರು.


ಶಾಲಾ ಶಿಕ್ಷಕ ಕ್ಲೆಮೆಂಟ್ ಪಿಂಟೋ ಸಂತ ಫಿಲೋಮಿನಾಳ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು. ಶಾಲಾ ಲಾಂಛನದ ಉದ್ಘಾಟನೆಯು ನಂತರ ನೆರವೇರಿತು.ಶಾಲಾ ಶಿಕ್ಷಕಿ ಆಶಾ ರೆಬೆಲ್ಲೋ ಸಭಾಧ್ಯಕ್ಷರನ್ನು ಪರಿಚಯಿಸಿದರು. ಸಭಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ,ಶಾಲೆಯ ಮುಖ್ಯ ಗುರು ಫಾ. ಮ್ಯಾಕ್ಸಿಮ್ ಡಿಸೋಜಾ ಎಂ ಸ್ವಾಗತಿಸಿದರು, ಶಾಲಾ ಶಿಕ್ಷಕಿ ಸವಿತಾ ಮೊಂತೆರೊ ವಂದಿಸಿದರು.ಶಿಕ್ಷಕ ರೋಶನ್ ಸಿಕ್ವೇರಾ,ಶಾಲಾ ಶಿಕ್ಷಕಿ ರೇಷ್ಮಾ ರೆಬೆಲ್ಲೊ ನಿರೂಪಿಸಿದರು. ಉಭಯ ಶಾಲೆಗಳ ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಉಭಯ ಶಾಲೆಗಳ ವಿದ್ಯಾರ್ಥಿಗಳಿಂದ ಜರುಗಿತು.

LEAVE A REPLY

Please enter your comment!
Please enter your name here