ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣ – ಓರ್ವ ವಿದ್ಯಾರ್ಥಿ ಪೊಲೀಸ್‌ ವಶಕ್ಕೆ

0

ಪುತ್ತೂರು:ನಗರದ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಚೂರಿಯಿಂದ ಇರಿದ ಘಟನೆ ಮಂಗಳವಾರ(ಆ.20) ನಡೆದಿದೆ.ವಿದ್ಯಾರ್ಥಿನಿಯನ್ನು ಸರಕಾರಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ತೆರಳಿದ ಪುತ್ತೂರು ಪೊಲೀಸರು ಸಿ ಸಿ ಟಿವಿ ಪರಿಶೀಲನೆ ನಡೆಸಿದ್ದು, ಚೂರಿ ಇರಿದ ಶಾಲಾ ವಿದ್ಯಾರ್ಥಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಯಾವ ಕಾರಣಕ್ಕೆ ಚೂರಿ ಇರಿಯಲಾಗಿದೆ ಎಂಬ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here