ಕೆಮ್ಮಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರೀಕೃತ ಉಚಿತ ಕಣ್ಣಿನ ತಪಾಸಣಾ ಶಿಬಿರ

0

ಉಪ್ಪಿನಂಗಡಿ; ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ,ಹಳೆ ವಿದ್ಯಾರ್ಥಿ ಸಂಘ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಯಿಲ ಮತ್ತು ಕೆಮ್ಮಾರ ಒಕ್ಕೂಟ ಇವರ ಸಹಭಾಗಿತ್ವದಲ್ಲಿ ನ್ಯೂ ವಿಷನ್ ಜನರೇಷನ್ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ)ಇವರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವು ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ಪಂಚಾಯತ್ ಸದಸ್ಯೆ ವಾರಿಜಾಕ್ಷಿ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯೂ ವಿಷನ್ ಜನರೇಷನ್ ಕಾರ್ಯಕ್ರಮದ ವ್ಯವಸ್ಥಾಪಕ ರಾಮಚಂದ್ರ ಶಿಬಿರದ ಉದ್ದೇಶ ಮತ್ತು ಮಹತ್ವದ ಜೊತೆಗೆ ನೇತ್ರದಾನದ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಎಂ. ಮಾತನಾಡಿ ಪಂಚೇಂದ್ರಿಗಳಲ್ಲಿ ಬೆಳಕು ಕಾಣುವ ಜ್ಞಾನೇಂದ್ರಿಯ ಕಣ್ಣು ಆಗಿದೆ. ಕಣ್ಣಿನ ಸೃಷ್ಟಿಯೇ ಒಂದು ಸೌಂದರ್ಯ. ಆ ಸೌಂದರ್ಯದಿಂದ ಇಡೀ ಪ್ರಪಂಚದ ಸೌಂದರ್ಯವನ್ನು ಆಸ್ವಾದಿಸಬಹುದು ಎಂದರು.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕೆಮ್ಮಾರ ಸರಕಾರಿ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಅಝೀಝ್ ಬಿ.ಕೆ ಮಾತನಾಡಿ ಪ್ರತೀ ಮಾನವ ಕುಲವು ಅಂಧತ್ವದಿಂದ ಮುಕ್ತಿ ಪಡೆದು, ಯಾವುದೇ ದೋಷಗಳಿದ್ದರೂ ಗ್ರಾಮೀಣ ಮಟ್ಟದ ಜನಗಳೂ ಕೂಡಾ ದೋಷ ಮುಕ್ತರಾಗಲು ಇಂತಹ ಅತ್ಯಮೂಲ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರ ಪ್ರಯೋಜನ ಮತ್ತು ಅವಶ್ಯಕತೆ ಇದರ ಸದುಪಯೋಗ ಶಿಬಿರಾರ್ಥಿಗಳು ಪಡೆದುಕೊಳ್ಳಬೇಕೆಂದರು.
ನ್ಯೂ ವಿಷನ್ ಜನರೇಷನ್ ಕಾರ್ಯಕ್ರಮದ ಸಹೋದ್ಯೋಗಿಗಳಾದ ಅಭಿಲಾಷ್, ರಕ್ಷತಾ, ಪ್ರಜ್ಞಾ ಇವರು ಶಾಲಾ ಮಕ್ಕಳಿಗೆ, ಸ್ಥಳೀಯ ನಾಗರಿಕರಿಗೆ ಉಚಿತ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ ನಡೆಸಿ ಅಗತ್ಯ ಇರುವವರಿಗೆ ಕನ್ನಡಕವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೆಮ್ಮಾರ ಒಕ್ಕೂಟ ಅಧ್ಯಕ್ಷ ರವಿಕಾಂತ ಬಡ್ಡಮೆ, ಕೊಯಿಲ ಒಕ್ಕೂಟ ಅಧ್ಯಕ್ಷೆ ಸೆಲಿಕತ್, ಶಾಲಾಭಿವೃದ್ದಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಬಡಿಲ, ಕೆಮ್ಮಾರ ಶಾಲಾ ಎಸ್‌ಡಿಎಂಸಿ ಸದಸ್ಯರಾದ ಖಾದರ್ ಅಡೆಕ್ಕಲ್ , ಪೋಷಕರು, ಗ್ರಾಮಸ್ಥರು, ಅಕ್ಷರ ದಾಸೋಹ ಸಿಬ್ಬಂದಿಗಳು ಮತ್ತು ಶಾಲೆಯ ಅಧ್ಯಾಪಕ ಸುಮನಾ, ಶ್ರೀಮತಿ ಮೆಹನಾಝ್ , ವೆಂಕಟ್ರಮಣ ಭಟ್ ಸಹಕರಿಸಿದರು. ಶಾಲೆಯ ಜಿಪಿಟಿ ಶಿಕ್ಷಕಿ ಸಂಧ್ಯಾ ನಿರೂಪಿಸಿದರು, ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ ವಂದಿಸಿದರು.

LEAVE A REPLY

Please enter your comment!
Please enter your name here