‘ಜ್ಞಾನ ಸಂಚಯನದಿಂದ ಆತ್ಮವಿಶ್ವಾಸ ವೃದ್ಧಿ’ ಎಸ್ ಐ. ಆಂಜನೇಯ ರೆಡ್ಡಿ
ಪುತ್ತೂರು: ವಿದ್ಯಾರ್ಥಿಗಳಲ್ಲಿ ನಿರಂತರವಾದ ಜ್ಞಾನ ಸಂಚಯನದ ಮನೋಭಾವವು ದೃಢವಾಗಿ ರೂಪುಗೊಳ್ಳಬೇಕು ಜ್ಞಾನಾರ್ಜನೆಯ ಪ್ರಮಾಣವು ವೃದ್ಧಿಯಾದಂತೆ ನಮ್ಮಲ್ಲಿ ಆತ್ಮವಿಶ್ವಾಸವು ಬೆಳೆಯುತ್ತದೆ ಆ ಮೂಲಕ ಸಾಧನಶೀಲ ದಾರಿಯಲ್ಲಿ ನಡೆಯುವ ಗುರಿ ಒಡಮೂಡುತ್ತದೆ ಎಂದು ಪುತ್ತೂರು ನಗರ ಠಾಣೆಯ ಪೊಲೀಸ್ ಉಪನರೀಕ್ಷಕ ಆಂಜನೇಯ
ರೆಡ್ಡಿಯವರು ನುಡಿದರು.
ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಆ.21ರಂದು ತನ್ನ ಮುಂದಾಳತ್ವದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ರಸಪ್ರಶ್ನಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ
ಕೊಂಬೆಟ್ಟು ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ರಸಪ್ರಶ್ನೆ ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್ ಆರ್ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಜೋಕಿಂ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ವೇದಿಕೆಯಲ್ಲಿ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ , ಶಿಕ್ಷಣ ಸಂಯೋಜಕ ಹರಿಪ್ರಸಾದ್ ಹಾಗೂ ಅಮೃತಕಲಾ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಪುತ್ತೂರು ಪುತ್ತೂರು ತಾಲೂಕು ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ಅಬ್ರಹಾಂ, ಶಿಕ್ಷಣ ತಜ್ಞ ಕೋಟಿಯಪ್ಪ ಪೂಜಾರಿ ಸೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೇತೃತ್ವ ವಹಿಸಿದ ಆಂಜನೇಯ ರೆಡ್ಡಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲಾ ಉಪ ಪ್ರಾಂಶುಪಾಲ ವಸಂತ ಮೂಲ್ಯ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ಕೃಪ ಪ್ರಾರ್ಥಿಸಿದರು. ಸಹಶಿಕ್ಷಕ ಜಾನ್ ವಾಲ್ಡರ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಅಮಿತಾ ಸನ್ಮಾನ ಪತ್ರ ವಾಚಿಸಿದರು. ಸಹ ಶಿಕ್ಷಕ ಪ್ರಶಾಂತ್ ಅನಂತಾಡಿ ವಂದಿಸಿದರು. ಸಹ ಶಿಕ್ಷಕ ನಾಗರಾಜ್ ಭಟ್ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು. ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
12 ಸರಕಾರಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸುವಿಕೆ
ತಾಲೂಕಿನ ಒಟ್ಟು 12 ಸರಕಾರಿ ಪ್ರೌಢ ಶಾಲೆಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.15,000 ದ್ವಿತೀಯ ಸ್ಥಾನಕ್ಕೆ ರೂಪಾಯಿ
ರೂ. 10,000 ದ್ವಿತೀಯ ಸ್ಥಾನಕ್ಕೆ ರೂ 5,000 ಬಹುಮಾನಗಳು ನಿಗದಿಯಾಗಿದ್ದವು. ಲಿಖಿತ ಸುತ್ತಿನ ಪರೀಕ್ಷೆಯ ನಂತರ ಮೌಖಿಕ ಸುತ್ತಿಗೆ ಎಂಟು ಪ್ರೌಢಶಾಲೆಗಳು ಆಯ್ಕೆಯಾಗಿ ಪ್ರಥಮ ಸ್ಥಾನವನ್ನು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟು ವಿದ್ಯಾರ್ಥಿಗಳಾದ ವೈಭವ್ ಪೂಜಾರಿ ಮತ್ತು ಮಧುಶ್ರೀ, ದ್ವೀತೀಯ ಸ್ಥಾನವನ್ನು ಕೆ.ಪಿ.ಎಸ್ ಕೆಯ್ಯೂರು ವಿದ್ಯಾರ್ಥಿಗಳಾದ ಅಶ್ಮಿತಾ ಎಸ್ ಮತ್ತು ರೋಯಲ್ ಡಿಸೋಜ, ತೃತೀಯ ಸ್ಥಾನವನ್ನು ಶಿವರಾಮ ಕಾರಂತ ಸರ್ಕಾರಿ ಪ್ರೌಢಶಾಲೆ ಪುತ್ತೂರು ನಗರ ವಿದ್ಯಾರ್ಥಿಗಳಾದ ಶ್ರಾವ್ಯ ಬಿ ಮತ್ತು ಅಭಿಷೇಕ್ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲ ವಸಂತ ಮೂಲ್ಯ ಇವರನ್ನು ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿಯವರು ಸನ್ಮಾನಿಸಿದರು.