ಇಚ್ಲಂಪಾಡಿ ಶಾಲೆಯಲ್ಲಿ ಚೆರ್ರಿಲರ್ನ್, ಇ-ಲರ್ನಿಂಗ್ ತಂತ್ರಜ್ಞಾನ ಅಳವಡಿಕೆ

0

ನೆಲ್ಯಾಡಿ: ಇಚ್ಲಂಪಾಡಿ ನೇರ್ಲ ಸರಕಾರಿ ಉನ್ನತ್ತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಚೆರ್ರಿಲರ್ನ್, ಇ-ಲರ್ನಿಂಗ್ ತಂತ್ರಜ್ಞಾನ ಅಳವಡಿಸಲಾಯಿತು.
ಚೆರ್ರಿಲರ್ನ್ ಎಂಬುವುದು ವಿದ್ಯಾರ್ಥಿಗಳಿಗೆ ಪಠ್ಯದ ವಿಷಯವನ್ನು ಮನೆಯಲ್ಲಿ ತಮ್ಮ ಸ್ಮಾರ್ಟ್ ಫೋನ್‌ನಿಂದ ಅನಿಮೇಟೆಡ್ ವೀಡಿಯೋಸ್ ಮತ್ತು ಚಟುವಟಿಕೆಗಳ ಮೂಲಕ ಸುಲಭವಾಗಿ ಕಲಿಯುವ ಆಪ್ ಆಗಿದ್ದು ಇದನ್ನು ಮಂಗಳೂರಿನ ತಿರುಮಲ ಎಂಟರ್‌ಪ್ರೈಸಸ್‌ನವರ ಸಹಯೋಗದೊಂದಿಗೆ ಉಚಿತವಾಗಿ ಅಳವಡಿಸಲಾಯಿತು. ಈ ಆಪ್‌ನಲ್ಲಿ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳ ಪಠ್ಯಕ್ರಮಗಳು ಲಭ್ಯವಿದ್ದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ. ಕಾರ್ಯಕ್ರಮವನ್ನು ಚೆರ್ರಿಲರ್ನ್‌ನ ಸಿಇಒ ಶ್ರೀನಿಧಿ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಸಂತ ಬಿಜೇರು, ಉಪಾಧ್ಯಕ್ಷೆ ನಂದಾ, ಶಾಲಾ ಮುಖ್ಯೋಪಾಧ್ಯಾಯನಿ ಜಯಶ್ರೀ ಎಸ್, ಚೆರ್ರಿಲರ್ನ್ ಸಂಸ್ಥೆಯ ಉದ್ಯೋಗಿಗಳು, ಶಿಕ್ಷಕರು, ಪೋಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಡಾ. ಗಿರೀಶ್ ಹೆಚ್.ಎಂ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here