ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 353ನೇ ಹಾಗೂ ಶ್ರೀ ಮಠದ 20ನೇ ಆರಾಧನಾ ಮಹೋತ್ಸವ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ಶ್ರೀ ಮಠದ ಅಧ್ಯಕ್ಷ ಉದಯಕುಮಾರ್ ಕೆ., ಮಠದ ಟ್ರಸ್ಟಿಗಳಾದ ಹರೀಶ್ ಉಪಾಧ್ಯಾಯ, ಗೋಪಾಲ ಹೆಗ್ಡೆ, ದಮಯಂತಿ ಆರ್. ಶೆಟ್ಟಿ, ಸದಾನಂದ ಪೂಜಾರಿ, ಶಾಂತರಾಮ ಭಟ್ ಕಾಂಚನ, ಹರೀಶ್ ನಾಯಕ್ ನಟ್ಟಿಬೈಲ್, ಶಿವಪ್ರಕಾಶ್ ಭಟ್, ಪ್ರಮುಖರಾದ ಕೆ. ರಾಧಾಕೃಷ್ಣ ನಾಕ್, ಧನ್ಯಕುಮಾರ್ ರೈ, ಚಂದಪ್ಪ ಮೂಲ್ಯ, ರಾಮಚಂದ್ರ ಮಣಿಯಾಣಿ, ಹರೀಶ್ ಭಂಡಾರಿ, ಪ್ರಶಾಂತ್ ಶಿವಾಜಿನಗರ, ಸುಧೀರ್ ಹೆಗ್ಡೆ, ವಿನೀತ್ ಶಗ್ರಿತ್ತಾಯ, ಶಿವಕುಮಾರ್ ಬಾರಿತ್ತಾಯ, ಶ್ರೀನಿಧಿ ಉಪಾಧ್ಯಾಯ, . ಸ್ವರ್ಣೇಶ್, ಬಿಪಿನ್, ವಿಷ್ಣುಮೂರ್ತಿ ಕುದ್ದಣ್ಣಾಯ, ಶಶಿಧರ ನೆಕ್ಕಿಲಾಡಿ, ಪ್ರಶಾಂತ್ ನೆಕ್ಕಿಲಾಡಿ, ದೇವಿಪ್ರಸಾದ್ ಶೆಟ್ಟಿ, ವಿನಯ್, ಕಾಮಾಕ್ಷಿ ಹೆಗ್ಡೆ, ಉಮೇಶ ಶೆಣೈ, ಡಾ. ನಿರಂಜನ ರೈ, ಕಂಗ್ವೆ ವಿಶ್ವನಾಥ ಶೆಟ್ಟಿ, ವಸುಧಾ ಉಪಾಧ್ಯಾಯ, ಬಿ.ಕೆ. ಆನಂದ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿ- ವಿಧಾನಗಳು ನೆರವೇರಿದವು.