ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಗೆ ರಜಾ ದಿನಗಳಲ್ಲಿಯೂ ಸೇವೆ ನೀಡಲಿರುವ ಮೆಸ್ಕಾಂ

0

ಆ.24 ಹಾಗೂ 25ರಂದು ಮೆಸ್ಕಾಂ ಕುಂಬ್ರ ಗ್ರಾಮಾಂತರ ಉಪ ವಿಭಾಗದ ಕಚೇರಿಯಲ್ಲಿ ಆಧಾರ್ ಜೋಡಣೆಗೆ ಅವಕಾಶ

ಪುತ್ತೂರು: ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡಲು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಶಿಬಿರ ಏರ್ಪಡಿಸಿ, ಸುಲಭ ಸೇವೆ ನೀಡುತ್ತಿರುವ ಮೆಸ್ಕಾಂ ಇದೀಗ ರೈತರಿಗೆ ಇನ್ನೂ ಅನುಕೂಲವಾಗುವಂತೆ ಪುತ್ತೂರು ಗ್ರಾಮಾಂತರ ಉಪ ವಿಭಾಗದ ಕುಂಬ್ರ ಕಚೇರಿಯು ಆ.24ರ ತಿಂಗಳ ಕೊನೇಯ ಶನಿವಾರ ಹಾಗೂ ಆ.25ರ ಆದಿತ್ಯವಾರದ ರಜಾ ದಿನಗಳಲ್ಲಿ ಕಚೇರಿ ಕಾರ್ಯನಿರ್ವಹಿಸುವ ಮೂಲಕ ಗ್ರಾಹಕರಿಗೆ ಸೇವೆ ನೀಡಲಿದೆ.

ಕೆ.ಇ.ಆರ್.ಸಿ ಹಾಗೂ ರಾಜ್ಯ ಕರ್ನಾಟಕ ಸರ್ಕಾರದ ಆದೇಶದಂತೆ ಎಲ್ಲಾ ಕೃಷಿ ನೀರಾವರಿ ಸ್ಥಾವರಗಳಿಗೆ ಸಹಾಯಧನವನ್ನು ಮುಂದುವರೆಸಲು ಆಧಾರ್ ಕಾರ್ಡನ್ನು ಖಡ್ಡಾಯವಾಗಿ ಜೋಡಣೆ ಮಾಡಬೇಕಾಗಿರುತ್ತದೆ. ಹೀಗಾಗಿ ಮೆಸ್ಕಾಂ ಕುಂಬ್ರ ಉಪ ಗ್ರಾಮಾಂತರ ವಿಭಾಗದ ಕಚೇರಿಯು ಆ.24 ಹಾಗೂ 25ರ ಎರಡು ರಜಾ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5.30ರ ತನಕ ಕಾರ್ಯನಿರ್ವಹಿಸಲಿದೆ. ಆಧಾರ್ ಜೋಡಣೆ ಮಾಡಿಸಲು ಬಾಕಿಯಿರುವ ರೈತರು ಕುಂಬ್ರದಲ್ಲಿರುವ ಗ್ರಾಮಾಂತರ ವಿಭಾಗದ ಕಚೇರಿಗೆ ಭೇಟಿ ನೀಡಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದು. ಆಧಾರ್ ಕಾರ್ಡ ಜೋಡಣೆಗೆ ಕೃಷಿ ನೀರಾವರಿ ಬಳಕೆದಾರರು ಆಧಾರ್ ಕಾರ್ಡ ಜೊತೆಗೆ ಆರ್.ಆರ್.ನಂಬರ್, ಜಾಗಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಯಾವುದೇ ದಾಖಲೆಗಳ ಪ್ರತಿಗಳನ್ನು (ಆರ್.ಟಿ.ಸಿ, ಕ್ರಯಚೀಟಿ, ವೀಲುನಾಮೆ ಮೂಲ ಬಳಕೆದಾರರು ಮೃತ ಪಟ್ಟಿದಲ್ಲಿ ಮರಣ ಪ್ರಮಾಣಪತ್ರ ಇತ್ಯಾದಿ) ಪಡೆದುಕೊಂಡು ಮೇಲಿನ ಎರಡು ದಿನಗಳಂದು ಕಛೇರಿಗೆ ಭೇಟಿ ನೀಡಿ ಆಧಾರ್ ಜೋಡಣೆ ಮಾಡಿಕೊಳ್ಳಬಹುದು. ಆಧಾರ್ ಜೋಡಣೆ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕಗಳನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here