ಒಳಮೊಗ್ರು ಗ್ರಾಪಂ ಪಿಡಿಒ ಮನ್ಮಥರಿಗೆ ವರ್ತಕರ ಸಂಘದಿಂದ ಸ್ವಾಗತ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ಗೆ ನೂತನವಾಗಿ ನೇಮಕಗೊಂಡ ಅಭಿವೃದ್ದಿ ಅಧಿಕಾರಿ ಮನ್ಮಥರವರನ್ನು ಕುಂಬ್ರ ವರ್ತಕರ ಸಂಘದಿಂದ ಸ್ವಾಗತಿಸಲಾಯಿತು.

ಆ.23 ರಂದು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರ ನೇತೃತ್ವದಲ್ಲಿ ಗ್ರಾಪಂಗೆ ತೆರಳಿದ ಸಂಘದ ಪದಾಧಿಕಾರಿಗಳು ಮನ್ಮಥರವರವರನ್ನು ಸ್ವಾಗತಿಸಿ ಗ್ರಾಮದ ಅಭಿವೃದ್ಧಿಗೆ ಪಂಚಾಯತ್‌ನೊಂದಿಗೆ ವರ್ತಕರ ಸಂಘ ಸಂಪೂರ್ಣ ಬೆಂಬಲ ನೀಡುತ್ತಿದ್ದು ಮುಂದೆಯೂ ನೀಡಲಿದೆ ಎಂದು ತಿಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪ್ರಭಾರ ಪಿಡಿಒ ನಮಿತಾ ಎ.ಕೆ, ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಕಾರ್ಯದರ್ಶಿ ಭವ್ಯ ರೈ, ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ,ಮಾಜಿ ಅಧ್ಯಕ್ಷರುಗಳಾದ ದಿವಾಕರ ಶೆಟ್ಟಿ, ನಾರಾಯಣ ಪೂಜಾರಿ ಕುರಿಕ್ಕಾರ, ಎಸ್.ಮಾಧವ ರೈ ಕುಂಬ್ರ, ಪದಾಧಿಕಾರಿಗಳಾದ ರಾಜೇಶ್ ರೈ ಪರ್ಪುಂಜ, ಸುರೇಶ್ ಕುಮಾರ್ ತಿಂಗಳಾಡಿ, ಪದ್ಮನಾಭ ಆಚಾರ್ಯ, ಉಸ್ಮಾನ್ ಮುಸ್ಲಿಯಾರ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here