ಪುತ್ತೂರು: 2024-25ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇದರ ವತಿಯಿಂದ ನಡೆದ ಪುತ್ತೂರು ಸ್ಥಳೀಯ ಸಂಸ್ಥೆಯ ನೇತೃತ್ವದಲ್ಲಿ ನಡೆದ ದೇಶಭಕ್ತಿ ಗೀತ-ಗಾಯನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರಿನ ಕಬ್ ವಿಭಾಗದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಲಿರುವರು. ವಿದ್ಯಾರ್ಥಿಗಳಾದ ವಂಶಿಕ್ .ಕೆ(ಕೊಡಿಪ್ಪಾಡಿಯ ಶ್ರೀ ಕುಶಾಲಪ್ಪ ನಾಯ್ಕ ಹಾಗೂ ಭವ್ಯ ದಂಪತಿಯ ಪುತ್ರ),ಎ.ವಿ.ಧನ್ವಿಕ್ ಕುಮಾರ್(ಅನಂತಾಡಿಯ ಶ್ರೀ ಕೆ. ಅರುಣ್ ಕುಮಾರ್ ಹಾಗೂ ವೇದಾವತಿ ದಂಪತಿಯ ಪುತ್ರ), ಉದ್ಯಾನ್. ಎಂ(ಪಡೀಲ್ ನ ಮಂಜಾಚಾರಿ ಟಿ.ವಿ ಹಾಗೂ ಪವಿತ್ರ ಸಿ.ಇ ದಂಪತಿಯ ಪುತ್ರ), ಅಥರ್ವ ಎಸ್ .ಆರ್ (ತೆಂಕಿಲದ ಶ್ರೀ ರಾಮನಾಯ್ಕ್ ಎಂ ಹಾಗೂ ಸೌಮ್ಯ ದಂಪತಿಯ ಪುತ್ರ), ಧನ್ವಿತ್ ಎಚ್. ಭಟ್(ಪಡ್ಡಾಯೂರಿನ ಹರಿಹರ ಜಿ .ಭಟ್ ಕೆಕ್ಕಾರ್ ಹಾಗೂ ಮಂಜುಳಾ ಭಟ್ ದಂಪತಿಯ ಪುತ್ರ) ಮತ್ತು ಬಿ.ಸಮರ್ಥ್ (ಬುಳೇರಿಕಟ್ಟೆಯ ಸಂತೋಷ್ ಭಟ್ ಹಾಗೂ ಶಶಿಕಲಾ ದಂಪತಿಯ ಪುತ್ರ)ಎಂದು ಶಾಲಾ ಮುಖ್ಯ ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.